ಶ್ರೀಶ್ರೀ ರವಿಶಂಕರ್ ಅವರಿಂದ 1000 ಆಯುರ್ವೇದಿಕ್ ಮಳಿಗೆಗಳು – News Mirchi
We are updating the website...

ಶ್ರೀಶ್ರೀ ರವಿಶಂಕರ್ ಅವರಿಂದ 1000 ಆಯುರ್ವೇದಿಕ್ ಮಳಿಗೆಗಳು

ವಿದೇಶೀ ಉತ್ಪನ್ನಗಳಿಗೆ ಸ್ಪರ್ಧೆ ನೀಡಲು ಮತ್ತೊಬ್ಬ ಆಧ್ಯಾತ್ಮಿಕ ಗುರು ಮುಂದಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ನ ಶ್ರೀ ಶ್ರೀ ರವಿಶಂಕರ್ ಅವರು ಆಯುರ್ವೇದಿಕ್ ಟೂತ್ ಪೇಸ್ಟ್, ಸಾಬೂನು ಮಾರಾಟಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ ಒಂದು ಸಾವಿರ ರೀಟೇಲ್ “ಶ್ರೀಶ್ರೀ ತತ್ವ” ಮಳಿಗೆಗಳನ್ನು ಆರಂಭಿಸಲಿದ್ದಾರೆ. ಭಾರತದಲ್ಲಿ ಆಯುರ್ವೇದಿಕ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರೂ ಆಯುರ್ವೇದಿಕ್ ಉತ್ಪನ್ನಗಳ ಸ್ಟೋರ್ ಗಳನ್ನು ಆರಂಭಿಸಲು ಮುಂದಾಗಿದ್ದಾರೆ.

ದೇಶದಲ್ಲಿ ಪ್ರಬಲವಾಗಿ ಬೇರೂರಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಇನ್ನು ಬಾಬಾ ರಾಮದೇವ್ ಅವರ ಪತಂಜಲಿಯಿಂದ ಮಾತ್ರವಲ್ಲದೇ, ಶ್ರೀ ಶ್ರೀ ಗಳ ರೀಟೇಲ್ ಸ್ಟೋರ್ ಗಳಿಂದಲೂ ಪ್ರಬಲ ಸ್ಪರ್ಧೆ ಎದುರಾಗಲಿದೆ.

ಇತ್ತೀಚಿನ ದಿನಗಳಲ್ಲಿ ಜನ ತಮ್ಮ ದೈನಂದಿನ ಜೀವನದಲ್ಲಿ ಆಯುರ್ವೇದ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದ, ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಉತ್ಪನ್ನಗಳಿಗಿಂತ ವಿಭಿನ್ನವಾಗಿ ತಮ್ಮ ಉತ್ಪನ್ನಗಳನ್ನು ನೀಡಲಿರುವುದಾಗಿ ಶ್ರೀಶ್ರೀ ಆಯುರ್ವೇದ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ತೇಜ್ ಕತ್ಪೀಟಿಯಾ ಹೇಳಿದ್ದಾರೆ.

2003 ರಿಂದಲೇ ಈ ಸಂಸ್ಥೆಯು ಆಧುನಿಕ ರೀಟೇಲ್ ಮಳಿಗೆಗಳು, ಆನ್ಲೈನ್ ಮೂಲಕ ಆರೋಗ್ಯ ಪಾನೀಯಗಳು, ಸಾಬೂನುಗಳು, ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ ಆಹಾರ ಮತ್ತು ದೈನಂದಿನ ಜೀವನದಲ್ಲಿ ಬಳಸುವ ಉತ್ಪನ್ನಗಳಲ್ಲಿ 300 ಕ್ಕೂ ಹೆಚ್ಚು ಉತ್ಪನ್ನಗಳನ್ನು ಭಾರತದಲ್ಲಿ ಮೂರು ಉತ್ಪಾದನಾ ಘಟಕಗಳ ಮೂಲಕ ತಯಾರಿಸುತ್ತಿದ್ದಾರೆ.

[ಇದನ್ನೂ ಓದಿ: ಎಲ್ಲಾ ಜಯಲಲಿತಾ ವೇದನಿಲಯಂನ ಆ “ರಹಸ್ಯ ಕೋಣೆ”ಗಾಗಿ?]

ಮತ್ತೊಂದೆಡೆ ಹಿಂದೂಸ್ತಾನ್ ಯೂನಿಲಿವರ್ ಕೂಡಾ ಆಯುಷ್ ಬ್ರಾಂಡ್ ನಡಿಯಲ್ಲಿ ಆಯುರ್ವೇದಿಕ್ ಪರ್ಸನಲ್ ಕೇರ್ ಉತ್ಪನ್ನಗಳನ್ನು ಮತ್ತೆ ಬಿಡುಗಡೆ ಮಾಡಿದೆ. ಡಾಬರ್ ಕೂಡಾ ತನ್ನ ಮೊದಲ ಆಯುರ್ವೇದಿಕ್ ಜೆಲ್ ಟೂತ್ ಪೇಸ್ಟ್ ಅನ್ನು ಡಾಬರ್ ರೆಡ್ ಹೆಸರಿನಡಿಯಲ್ಲಿ ಬಿಡುಗಡೆ ಮಾಡಿದೆ.

Contact for any Electrical Works across Bengaluru

Loading...
error: Content is protected !!