ಮುಸ್ಲಿಂ ಮತ ಒಡೆದರೆ ಬಿಜೆಪಿಗೆ ಅನುಕೂಲ: ಮಾಯಾವತಿ – News Mirchi

ಮುಸ್ಲಿಂ ಮತ ಒಡೆದರೆ ಬಿಜೆಪಿಗೆ ಅನುಕೂಲ: ಮಾಯಾವತಿ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಪಕ್ಷಗಳಿಂದ ಮತದಾರರ ಓಲೈಕೆ ಮುಂದುವರೆದಿದೆ. ಮುಸ್ಲಿಂ ಸಮುದಾಯದ ಮತಗಳು ವಿವಿಧ ಪಕ್ಷಗಳ ನಡುವೆ ಸೀಳಿ ಹೋದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಎಚ್ಚರಿಸಿದ್ದಾರೆ.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮುಗಲಭೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬುಲಂದ್ ಶಹರ್ ನಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಹೇಳಿದರು. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ 100 ಜನರಿಗೆ ಬಿಎಸ್ಪಿ ಟಿಕೆಟ್ ನೀಡಿದೆ.

Loading...

Leave a Reply

Your email address will not be published.