ನಿಂಬೆ ಬೆರೆಸಿದ ಬಿಸಿ ನೀರಿನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ |News Mirchi

ನಿಂಬೆ ಬೆರೆಸಿದ ಬಿಸಿ ನೀರಿನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

ಸಾಮಾನ್ಯವಾಗಿ ಬಹುತೇಕ ಜನರ ದಿನ ಆರಂಭವಾಗುವುದೇ ಬೆಳಗ್ಗೆ ಕಾಫಿ ಅಥವಾ ಚಹಾ ಸೇವನೆಯ ಮೂಲಕ. ಆದರೆ ಇದರ ಬದಲಿಗೆ ಒಂದು ಕಪ್ ನಿಂಬೆ ರಸದಿಂದ ನಿಮ್ಮ ದಿನವನ್ನು ಆರಂಭಿಸುವಂತೆ ತಜ್ಞರು ಹೇಳುತ್ತಾರೆ. ಅದರ ರುಚಿ ಹುಳಿ ಇರುತ್ತದೆ ಎಂಬುದು ಇದಕ್ಕೆ ಕಾರಣವಲ್ಲ. ಆದರೆ ಆರೋಗ್ಯ ದೃಷ್ಟಿಯಿಂದ ಇದರಿಂದ ಹಲವಾರು ಲಾಭಗಳಿವೆ.

  • No items.

ಪ್ರತಿನಿತ್ಯ ಬಿಸಿ ನಿಂಬೆ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚು ಸಕ್ರಿಯವಾಗುವಂತೆ ಮಾಡುತ್ತದೆಯಂತೆ. ಇದರಿಂದಾಗಿ ಆ ದಿನ ಪೂರ್ತಿ ನಿಮ್ಮ ದೇಹವು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆಯುತ್ತದೆ. ಆಹಾರವು ಜೀರ್ಣಾಂಗ ವ್ಯವಸ್ಥೆಯಲ್ಲಿ ಸರಾಗವಾಗಿ ಸಾಗಲು ಅನುಕೂಲವಾಗುತ್ತದೆ.

ನಿಂಬೆ ರಸದಲ್ಲಿರುವ ಕರಗಬಲ್ಲ ಫೈಬರ್ ಪೆಕ್ಟಿನ್ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಹೀಗಾಗಿ ಸಕ್ಕರೆ ಬೆರೆಸಿದ ಟೀ ಬದಲಿಗೆ ಒಂದು ಕಪ್ ಬಿಸಿ ನಿಂಬೆ ನೀರನ್ನು ಕುಡಿಯುವುದು ಉತ್ತಮ.

ಹೊಟ್ಟೆ ತುಂಬ ಉಣ್ಣುವುದರಿಂದ ಮರುದಿನ ಕೆಲವರಿಗೆ ಎದೆಯುರಿ ಅಥವಾ ಉಬ್ಬಿದ ಹೊಟ್ಟೆಗೆ ಕಾರಣವಾಗುತ್ತದೆ. ನಿಂಬೆ ರಸದೊಂದಿಗೆ ಬಿಸಿ ನೀರು ಸೇವಿಸಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಅಸಿಡಿಟಿಯನ್ನು ಕಡಿಮೆ ಮಾಡಬಹುದು.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!