ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ರದ್ದು

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಪೇದೆಗಳಿಂದ ಚಾಕರಿ ಮಾಡಿಸಿಕೊಳ್ಳುವ ‘ಅರ್ಡರ್ಲಿ’ಪದ್ಧತಿಯನ್ನು ಕೊನೆಗೂ ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಪೇದೆಗಳನ್ನು ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಆಳುಗಳಂತೆ ಬಳಸಿಕೊಳ್ಳುವ ಪದ್ಧತಿಯನ್ನು ಕೈಬಿಡುವುದು ಹಲವು ದಿನಗಳ ಬೇಡಿಕೆಯಾಗಿತ್ತು. ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪದ್ಧತಿಗೆ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಮುಖ್ಯ ಪೇದೆ, ಪೇದೆ, ಎಎಸ್ಐ ಮತ್ತು ಸಬ್ ಇನ್ಸ್ ಪೆಕ್ಟರ್ ಗಳಿಗೆ ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು ರೂ. 2 ಸಾವಿರ ಮೊತ್ತದ ವಿಶೇಷ ಭತ್ಯೆಗಳನ್ನು ನೀಡಲಾಗುವುದು ಎಂದರು. ಇಲಾಖೆಯ ಸುಮಾರು 80 ಸಾವಿರ ಪೊಲೀಸ್ ಸಿಬ್ಬಂದಿಗೆ ಇದರಿಂದ ಲಾಭವಾಗುತ್ತದೆ ಎಂದರು.

ಹತ್ತು ವರ್ಷಗಳಿಗೆ ಒಂದು ಬಡ್ತಿ ಕಡ್ಡಾಯವಾಗಿ ನೀಡಲಾಗುವುದು ಎಂದ ಮುಖ್ಯಮಂತ್ರಿಗಳು, ಮುಂದಿನ ವರ್ಷ ರಚನೆಯಾಗುವ ವೇತನ ಆಯೋಗದ ಶಿಫಾರಸಿನಂತೆ ಬಹುದಿನಗಳ ಬೇಡಿಕೆಯಾಗಿರುವ ವೇತನ ಪರಿಷ್ಕರಣೆ ನಡೆಯಲಿದೆ ಎಂದರು.