ಜಲ್ಲಿಕಟ್ಟು ಬೆಂಬಲಕ್ಕೆ ರವಿಶಂಕರ್ ಗುರೂಜಿ

ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧ ವಿರೋಧಿಸಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಜಲ್ಲಿಕಟ್ಟು ಬೆಂಬಲಿಸಿ ಕೆಲ ತಮಿಳು ಸಿನಿ ನಟರೂ ಹೇಳಿಕೆ ನೀಡಿದ್ದಾರೆ. ಇದೀಗ ಜಲ್ಲಿಕಟ್ಟು ಕ್ರೀಡೆಗೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಈ ಹಬ್ಬಕ್ಕಾಗಿಯೇ ಗೂಳಿಗಳನ್ನು ಸಿದ್ಧಗೊಳಿಸುತ್ತಾರೆ. ಅಲ್ಲದೆ ಅವುಗಳನ್ನು ಅಲ್ಲಿನ ಜನರು ಗೌರವದಿಂದ ಕಾಣುತ್ತಾರೆ ಮತ್ತು ಅವುಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಾರೆ. ಅಲ್ಲಿನ ಜನರ ನಂಬಿಕೆ ಆಚರಣೆಗಳನ್ನು ನಾವು ಗೌರವಿಸಬೇಕು ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ತಮಿಳುನಾಡಿನ ಜನರಿಗೆ ಈ ಕ್ರೀಡೆ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಿದೆ ಎಂದು ರವಿಶಂಕರ್ ಹೇಳಿದ್ದಾರೆ.

ಜಲ್ಲಿಕಟ್ಟು ಕ್ರೀಡೆಯಲ್ಲಿ ಪ್ರಾಣಿಗಳ ಹಿಂಸೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಗುರೂಜಿ, ಪ್ರಾಣಿ ಹಿಂಸೆ ವಿರುದ್ಧ ನಿರ್ಧಿಷ್ಟ ದೂರುಗಳನ್ನು ದಾಖಲಿಸಬಹುದು ಆದರೆ ಇಡೀ ಹಬ್ಬವನ್ನೇ ನಿಷೇಧಿಸುವುದು ಸರಿಯಲ್ಲ. ಪ್ರಾಣಿ ಹಿಂಸೆಯನ್ನು ತಡೆಯಬೇಕೆಂದರೆ ಮೊದಲು ಕಸಾಯಿಖಾನೆಗಳನ್ನು ಮುಚ್ಚಲಿ ಎಂದರು.

Loading...

Leave a Reply

Your email address will not be published.

error: Content is protected !!