ಅಮೆರಿಕದಲ್ಲಿ ಮರು ಮತ ಎಣಿಕೆ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ‌ ಮಹತ್ವದ ಬೆಳವಣಿಗೆ ನಡೆದಿದೆ. ಡೊನಾಲ್ಡ್ ಟ್ರಂಪ್ ಅಲ್ಪ ಅಂತರದಿಂದ ಗೆದ್ದುಬಂದ ಮೂರು ರಾಜ್ಯಗಳಲ್ಲಿ ಮರುಎಣಿಕೆ ನಡೆಸಬೇಕೆಂಬ ಒತ್ತಾಯಗಳು ಹೆಚ್ಚಾದ್ದರಿಂದ, ವಿಸ್ಕಾನ್ಸಿನ್ ರಾಜ್ಯ ಚುನಾವಣಾ ಆಯೋಗ ರಾಜ್ಯಾದ್ಯಂತ ಮರುಎಣಿಕೆಗೆ ಅಂಗೀಕರಿಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ವಿಸ್ಕಾನ್ಸಿನ್ ನಲ್ಲಿ ದಾಖಲಾದ ಮತಗಳನ್ನು ಪುನಃ ಎಣಿಕೆ ಮಾಡುವಂತೆ ಗ್ರೀನ್ ಪಾರ್ಟಿ ಅಭ್ಯರ್ಥಿ ಜಿಲ್ ಸ್ಟೀನ್ ಮನವಿ ಮಾಡಿದ್ದರು.

ಇದಕ್ಕೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ. ಮುಂದಿನ ವಾರ ರೀಕೌಂಟಿಂಗ್ ನಡೆಯಲಿದೆ. ಇದಕ್ಕಾಗುವ ಖರ್ಚು ಗ್ರೀನ್ ಪಾರ್ಟಿಯೇ ಭರಿಸಲಿದೆ.

ಗ್ರೀನ್ ಪಾರ್ಟಿ ಅಭ್ಯರ್ಥಿ ಕೈಗೊಳ್ಳುತ್ತಿರುವ ರೀಕೌಂಟಿಂಗ್ ಪ್ರಕ್ರಿಯೆಯಿಂದ, ಈಗಾಗಲೇ ಸೋತಿರುವ ಹಿಲರಿ ಕ್ಲಿಂಟನ್ ಬಳಗದಲ್ಲಿ ಸ್ವಲ್ಪ ಆಶಾ ಭಾವನೆ ಚಿಗುರೊಡೆದಿದೆ. ಆದರೆ ರೀಕೌಂಟಿಂಗ್ ನಡೆದರೂ ಫಲಿತಾಂಶ ಅದಲು ಬದಲಾಗಿ ಕ್ಲಿಂಟನ್ ಅಧ್ಯಕ್ಷರಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ಯಿದೆ.

ಓಟಿಂಗ್ ನಲ್ಲಿ ಭಾರೀ ಪ್ರಮಾಣದಲ್ಲಿ ಹ್ಯಾಕಿಂಗ್ ನಡೆದಿದೆ ಎಂದು ರೀಕೌಂಟಿಂಗ್ ಒತ್ತಾಯಿಸಿರುವ ಗ್ರೀನ್ ಪಾರ್ಟಿ ಅಭ್ಯರ್ಥಿ ಜಿಲ್ ಸ್ಟೀನ್ ಆರೋಪ.