ಮೊಬೈಲ್ ಕಳ್ಳರಿಗಿದು ಕಹಿ ಸುದ್ದಿಯಂತೆ ಯಾಕೆ ಗೊತ್ತಾ…? – News Mirchi

ಮೊಬೈಲ್ ಕಳ್ಳರಿಗಿದು ಕಹಿ ಸುದ್ದಿಯಂತೆ ಯಾಕೆ ಗೊತ್ತಾ…?

ಇದು ಮೊಬೈಲ್ ಕಳ್ಳರಿಗೆ ಕಹಿ ಸುದ್ದಿ. ಇನ್ನು ಮುಂದೆ ಕದ್ದ ಮೊಬೈಲುಗಳಿಗೆ ಪೂರ್ತಿ ಸೇವೆ ನಿಂತುಹೋಗುವಂತೆ ಸರ್ಕಾರ ಪ್ರಯತ್ನ ಆರಂಭಿಸಿದೆ. ಈ ಹೊಸ ವ್ಯವಸ್ಥೆ ಪ್ರಕಾರ ಕದ್ದ ಫೋನ್ ಗಳಲ್ಲಿ ಸಿಮ್ ಕಾರ್ಡು, ಐಎಂಇಐ ಸಂಖ್ಯೆ ಬದಲಿಸಿದರೂ ಅವು ಕೆಲಸ ಮಾಡದಂತೆ ಮಾಡುತ್ತಿದ್ದಾರಂತೆ.

ಈ ನಿಟ್ಟಿನಲ್ಲಿ ಸರ್ಕಾರಿ ಟೆಲಿಕಾಂ ಸಂಸ್ಥೆ “ಬಿಎಸ್ಎನ್ಎಲ್” ಪುಣೆ ಕೇಂದ್ರದಲ್ಲಿ ಈ ಪ್ರಾಜೆಕ್ಟ್ ಕೈಗೊಳ್ಳುತ್ತಿದೆ. ಈ ಯೋಜನೆ ಆರು ತಿಂಗಳಲ್ಲಿ ಯಶಸ್ವಿಯಾಗಿ ಫಲಿತಾಂಶ ನೀಡುತ್ತದೆ ಎಂದು ಟೆಲಿಕಾಂ ವಿಭಾಗದ ಮೂಲಗಳು ಹೇಳಿವೆ. ಸಿಇಐಆರ್ ಎಂಬ ಈ ಹೊಸ ವ್ಯವಸ್ಥೆಗಾಗಿ ಸಾಫ್ಟ್ ವೇರ್ ತಯಾರಿಸುವ ಕೆಲಸದಲ್ಲಿ ಈಗ ಮಗ್ನರಾಗಿದ್ದಾರೆ.

ಮೊಬೈಲ್ ಆಪರೇಟರ್ ಗಳ ಐಎಮ್ಇಐ ಡಾಟಾಬೇಸ್ ಗಳಿಗೆ ಒಂದು ಕೇಂದ್ರ ವ್ಯವಸ್ಥೆಯಾಗಿ ಸಿಇಐಆರ್ ಕಾರ್ಯನಿರ್ವಹಿಸುತ್ತಿದೆ. ಕದ್ದ, ಕಳೆದುಕೊಂಡ ಫೋನ್ ಗಳಿ ಐಎಂಇಐ ಸಂಖ್ಯೆಗಳನ್ನೆಲ್ಲಾ ಇದು ಸಂಗ್ರಹಿಸುತ್ತದೆ. ನಂತರ ಯಾವುದೇ ಸಿಮ್ ಬದಲಿಸಿದರೂ, ಅಂತಹ ಫೋನ್ ಕೆಲಸ ಮಾಡದಂತೆ ಮಾಡುತ್ತದೆ. ಅಂದರೆ ಕಳ್ಳರು ಏನೇ ತಿಪ್ಪರಲಾಗ ಹಾಕಿದರೂ ಆ ಫೋನ್ ಗಳು ಕೆಲಸಕ್ಕೆ ಬರೋದಿಲ್ಲ. ಅವುಗಳನ್ನು ಕಸದ ಬುಟ್ಟಿಗೆ ಎಸೆಯುವುದೇ ಮಾರ್ಗ. ಸೆಲ್ ಫೋನ್ ಗಳನ್ನು ನೋಡಿದರೆ ಕಾಗದಗಳಂತೆ ನೋಡುವ ದಿನಗಳೂ ಬರಬಹುದು.

ಇದನ್ನೂ ಓದಿ: ನಿರ್ಮಾಣವಾಗುತ್ತಿದೆ ಫೇಸ್ ಬುಕ್ ವಿಲೇಜ್

ಒಂದು ವೇಳೆ ನಕಲಿ ಐಎಂಇಐ ಸಂಖ್ಯೆ ಸೃಷ್ಟಿಸಿ ಕಣ್ಣಿಗೆ ಮಣ್ಣೆರಚಬೇಕು ಎಂದು ಭಾವಿಸಿದರೂ ಅವರ ಪ್ರಯತ್ನ ಫಲಿಸುವುದಿಲ್ಲವಂತೆ. ಸಿಇಐಆರ್ ಅಂತ ಕೃತ್ಯಗಳನ್ನು ಕೂಡಲೇ ಕಂಡುಹಿಡಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದು ಕಡೆ ಐಎಂಇಐ ಸಂಖ್ಯೆಯನ್ನು ಬದಲಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಗುರುತಿಸಿ ಮೂರು ವರ್ಷಗಳ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ನಿಯಮಗಳನ್ನೂ ಜಾರಿಗೆ ತರಲಿದ್ದಾರೆ ಎಂದು ಟೆಲಿಕಾಂ ಸಚಿವಾಲಯ ಹೇಳಿದೆ.

Loading...