ಅಪಹರಣವಾಗಿದ್ದ ವಾಹನ ಪತ್ತೆ, ಪತ್ನಿಯೊಂದಿಗೆ ಚಾಲಕ ಪರಾರಿ

ಬೆಂಗಳೂರು: 1.37 ಕೊಟಿ ಮೌಲ್ಯದ ಹೊಸ 2000 ಮತ್ತು 100 ರ ನೋಟುಗಳೊಂದಿಗೆ ಅಪಹರಣವಾಗಿದ್ದ ವಾಹನ ಇಂದು ಬೆಳಗ್ಗೆ ಬೆಂಗಳೂರಿನ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಪತ್ತೆಯಾಗಿದೆ.

ವ್ಯಾಸ ರಚಿತ ಮಹಾಭಾರತ

ವಾಹನದಲ್ಲಿ ಗನ್ ಹಾಗೂ 45 ಲಕ್ಷ ಹಣ ಬಿಟ್ಟು ಉಳಿದ 92 ಲಕ್ಷ ರೂಪಾಯಿ ಹಣದೊಂದಿಗೆ ರೂಪಾಯಿಯೊಂದಿಗೆ ಆರೋಪಿ ಡೊಮಿನಿಕ್ ರಾಯ್ ಪರಾರಿಯಾಗಿದ್ದಾನೆ. ಚಾಲಕ ತಮಿಳುನಾಡು ಮೂಲದವನಾಗಿದ್ದು, ಲಿಂಗರಾಜಪುರಂನಲ್ಲಿ ವಾಸವಿದ್ದ. ಆರೋಪಿ ತನ್ನ ಪತ್ನಿ ಮತ್ತು ಮಗನೊಂದಿಗೆ ಪರಾರಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೆಕ್ಯೂರ್ ಟ್ರಾನ್ಸಿಟ್ ಸಂಸ್ಥೆ ವಿವಿದ ಬ್ಯಾಂಕುಗಳಿಗೆ ಹಣ ತಲುಪಿಸುತ್ತಿದ್ದು, ನಿನ್ನೆ ಕೆಜಿ ರಸ್ತೆಯ ಬ್ಯಾಂಕ್ ಇಂಡಿಯಾದಿಂದ ಬಳಿ ವಾಹನ ನಿಲ್ಲಿಸಲಾಗಿತ್ತು. ಗನ್‌ ಮ್ಯಾನ್‌ಗಳ ಕಣ್ತಪ್ಪಿಸಿ ಚಾಲಕ ವಾಹನವನ್ನು ಅಪಹರಿಸಿದ್ದ. ಚಾಲಕನ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.

error: Content is protected !!