ಜೀಪಿಗೆ ಯುವಕನನ್ನು ಕಟ್ಟಿದ ಪ್ರಕರಣ: ಸೇನೆ ಹೇಳಿದ್ದೇನು? – News Mirchi

ಜೀಪಿಗೆ ಯುವಕನನ್ನು ಕಟ್ಟಿದ ಪ್ರಕರಣ: ಸೇನೆ ಹೇಳಿದ್ದೇನು?

ಕಲ್ಲೆಸೆಯುವವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಾಶ್ಮೀರ ವ್ಯಕ್ತಿಯನ್ನು ಮಾನವ ಕವಚವನ್ನಾಗಿ ಸೇನಾ ಜೀಪಿಗೆ ಕಟ್ಟಬೇಕಾಗಿ ಬಂತು ಎಂದು ಸೇನೆಯ ಮೂಲಗಳು ಹೇಳಿವೆ. ಏಪ್ರಿಲ್ 9 ರಂದು ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಮತಗಟ್ಟೆಯಲ್ಲಿ 9 ಜನ ಐಟಿಬಿಪಿ, ಜಮ್ಮೂ ಕಾಶ್ಮೀರ ಪೊಲೀಸರಿದ್ದರು. ಆ ಮತಗಟ್ಟೆಯನ್ನು ಸುಮಾರು 400 ಜನ ಸುತ್ತುವರೆದಿದ್ದರು. ಎಲ್ಲರ ಕೈಗಳಲ್ಲೂ ಕಲ್ಲುಗಳಿದ್ದವು. ಹೊರಗೆ ಬಂದರೆ ಕಲ್ಲೆಸೆತೆಕ್ಕೆ ಸಿಲುಕುವುದು ಖಚಿತ. [ರೈತರ ಕಣ್ಣ ಹನಿ ಬೆವರ ಹನಿ ]

ಇಂತಹ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಕೂಡಲೇ ಮೇಲಧಿಕಾರಿಗಳನ್ನು ಸಂಪರ್ಕಿಸಿದರು. ಅವರು ಕೂಡಲೇ ಕ್ವಿಕ್ ರೆಸ್ಪಾನ್ಸ್ ಟೀಮ್ ಕಳುಹಿಸಿದರು. ಎಲ್ಲರನ್ನೂ ಸೇರಿಸಿದರೂ ಯೋಧರ ಸಂಖ್ಯೆ 25 ದಾಟಲಿಲ್ಲ. ಹೀಗಾಗಿ ಕ್ವಿಕ್ ರೆಸ್ಪಾನ್ಸ್ ಟೀಮ್ ಕಮಾಂಡರ್ ಒಬ್ಬರು ಕಲ್ಲೆಸೆಯಲು ಬಂದಿದ್ದ ಫಾರೂಖ್ ಎಂಬ ವ್ಯಕ್ತಿಯನ್ನು ಹಿಡಿದು ಮಾನವ ಕವಚವನ್ನಾಗಿ ಜೀಪಿನ ಮುಂಬಾಗದಲ್ಲಿ ಕಟ್ಟಿದರೇ ಹೊರತು, ಆತನಿಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಸೇನೆ ಹೇಳಿದೆ.

ಜೀಪಿಗೆ ಫಾರೂಖ್ ನನ್ನು ಕಟ್ಟಿ ಆತನಿಗೆ “ನಾನು ಕಲ್ಲೆಸೆಯುವನು” ಎಂದು ಬರೆದ ಕಾಗದ ಅಂಟಿಸಿದ್ದ ವೀಡಿಯೋ ಹಲವರ ವಿರೋಧಕ್ಕೆ ಕಾರಣವಾಗಿತ್ತು. ಆದರೆ ತಾನು ಕಲ್ಲೆಸೆಯಲು ಬಂದಿರಲಿಲ್ಲ. ಹತ್ತಿರದ ಸಂಬಂಧಿಯೊಬ್ಬರು ತೀರಿಕೊಂಡಿದ್ದು, ಅಲ್ಲಿಗೆ ಹೋಗಿ ಬರುತ್ತಿದ್ದಾಗ ನನ್ನನ್ನು ಹಿಡಿದು ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿದರು ಎಂದು ಫಾರೂಖ್ ಆರೋಪಿಸಿದ್ದಾನೆ. ನಾನು ಬಡವನಾಗಿದ್ದು, ಈ ಕುರಿತು ಯಾವುದೇ ದೂರು ನೀಡುವುದಿಲ್ಲ ಎಂದು ಆತ ಹೇಳಿದ್ದೇನೆ.

Loading...