ರಿಪಬ್ಲಿಕ್ ಟಿವಿ, ಟೈಮ್ಸ್ ನೌ ರೇಟಿಂಗ್ ಜಗಳ: ಇಂತಹ ರೇಟಿಂಗ್ ನಿಲ್ಲಿಸಲು ಸೂಚನೆ – News Mirchi

ರಿಪಬ್ಲಿಕ್ ಟಿವಿ, ಟೈಮ್ಸ್ ನೌ ರೇಟಿಂಗ್ ಜಗಳ: ಇಂತಹ ರೇಟಿಂಗ್ ನಿಲ್ಲಿಸಲು ಸೂಚನೆ

ಲ್ಯಾಂಡಿಂಗ್ ಪೇಜ್ ಗಳ ಮೂಲಕ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಾನೆಲ್ ಗಳಿಗೆ ರೇಟಿಂಗ್ ನೀಡುವುದನ್ನು ನಿಲ್ಲುಸುವಂತೆ ಸ್ಮೃತಿ ಇರಾನಿ ಅವರ ನೇತೃತ್ವದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವೀಕ್ಷಕರನ್ನು ಅಳೆಯುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ(BARC) ಗೆ ಸೂಚಿಸಿದೆ.

ಟಿವಿ ಆನ್ ಮಾಡುವಾಗ ಮೊದಲಿಗೆ ಪರದೆಯ ಮೇಲೆ ಕಾಣಿಸುವ ಚಾನೆಲ್ ಅನ್ನು ಲ್ಯಾಂಡಿಂಗ್ ಪೇಜ್ ಎನ್ನಲಾಗುತ್ತದೆ. ಈ ತಂತ್ರವನ್ನು ಅನುಸರಿಸಿ ರೇಟಿಂಗ್ ವೃದ್ಧಿ ಮಾಡಿಕೊಳ್ಳುವುದು ಟ್ರಾಯ್ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಮಾಹಿತಿ ಪ್ರಸಾರ ಸಚಿವಾಲಯ ಹೇಳಿದೆ.

ಕೇಬಲ್ ಆಪರೇಟರ್ ಗಳ ಜೊತೆ ಒಪ್ಪಂದ ಮಾಡಿಕೊಂಡು ಲ್ಯಾಂಡಿಂಗ್ ಪೇಜ್ ಮೂಲಕ ರೇಟಿಂಗ್ ವೃದ್ಧಿಸಿಕೊಳ್ಳುತ್ತಿದೆ ಎಂದು ಟೈಮ್ಸ್ ನೌ ವಿರುದ್ಧ ರಿಪಬ್ಲಿಕ್ ಟಿವಿ ಆಕ್ರೋಶ ವ್ಯಕ್ತಪಡಿಸಿತ್ತು. ಟೈಮ್ಸ್ ನೌ ಕ್ರಮವು ಒತ್ತಾಯಪೂರ್ವಕವಾಗಿ ಅವರ ಚಾನೆಲ್ ಅನ್ನು ವೀಕ್ಷಕರ ಮೇಲೆ ಹೇರಿದಂತಾಗುತ್ತಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿತ್ತು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಟೌಮ್ಸ್ ನೌ ಸುದ್ದಿ ವಾಹಿನಿ, ಲ್ಯಾಂಡಿಂಗ್ ಪೇಜ್ ಗಾಗಿ ಹಣ ವೆಚ್ಚ ಮಾಡಿ ಹೆಚ್ಚು ವೀಕ್ಷಕರನ್ನು ಸೆಳೆಯುವುದು ಒಂದು ಉತ್ತಮ ಮಾರ್ಗ ಎಂದು ಸಮರ್ಥಿಸಿಕೊಂಡಿದ್ದ ಟೌಮ್ಸ್ ನೌ, ರಿಪಬ್ಲಿಕ್ ಟಿವಿ ಹಣ ವೆಚ್ಚ ಮಾಡಲು ಹಿಂಜರಿದು ಹಣ ಉಳಿಸಲು ನೋಡಿದರೆ ಅದು ನಿಜವಾಗಿಯೂ ಅವರಿಗೆ ಲಾಭವೇ ಎಂದು ಟೌಮ್ಸ್ ನೌ ಪ್ರತಿಕ್ರಿಯಿಸಿತ್ತು.

BARC ರೇಟಿಂಗ್ ನಲ್ಲಿ ರಿಪಬ್ಲಿಕ್ ಟಿವಿ ಮತ್ತು ಟೌಮ್ಸ್ ನೌ ನೀನಾ ನಾನಾ ಎನ್ನುವಂತೆ ಸ್ಪರ್ಧಿಸುತ್ತಿವೆ. ಯಾವುದೇ ಸಮಯದಲ್ಲಿ ಒಂದು ಚಾನೆಲ್ ನಲ್ಲಿ ನಾವೇ ಮೊದಲು ಎಂದು ಪ್ರಸಾರ ಮಾಡಿದರೆ ಸಾಕು, ಅದೇ ಕ್ಷಣದಲ್ಲಿ ಮತ್ತೊಂದು ಚಾನೆಲ್ ನಲ್ಲಿ ಮತ್ಯಾವುದೋ ವಾರದ ರೇಟಿಂಗ್ ತೋರಿಸಿ ನಾವು ಮೊದಲು ಎನ್ನುತ್ತದೆ. ಇತ್ತೀಚಿನ BARC ರೇಟಿಂಗ್ ಮಾಹಿತಿಯ ಪ್ರಕಾರ ರಿಪಬ್ಲಿಕ್ ಟಿವಿ 899 ರೇಟಿಂಗ್ ಪಾಯಿಂಟ್ ಪಡೆದಿದ್ದರೆ, ಟೌಮ್ಸ್ ನೌ 868 ಪಾಯಿಂಟ್ ಗಳಿಸಿತ್ತು.

Loading...