H-1B ವೀಸಾ ಬಳಕೆ ನಿಲ್ಲಿಸಿ, ಆಯಾ ದೇಶದ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಿ: ನಾರಾಯಣಮೂರ್ತಿ – News Mirchi

H-1B ವೀಸಾ ಬಳಕೆ ನಿಲ್ಲಿಸಿ, ಆಯಾ ದೇಶದ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಿ: ನಾರಾಯಣಮೂರ್ತಿ

ಭಾರತೀಯ ಸಾಫ್ಟ್ ವೇರ್ ಕಂಪನಿಗಳು ಹೆಚ್-1ಬಿ ವೀಸಾಗಳ ಮೇಲೆ ಉದ್ಯೋಗಿಗಳನ್ನು ಕಳುಹಿಸುವುದನ್ನು ನಿಲ್ಲಿಸಬೇಕು ಮತ್ತು ಅಮೆರಿಕದಲ್ಲಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ. ವಿದೇಶಿ ಉದ್ಯೋಗಿಗಳು ಅಮೆರಿಕಕ್ಕೆ ಬರುವುದಕ್ಕೆ ಕಡಿವಾಣ ಹಾಕಲು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿಯವರು ಭಾರತೀಯ ಸಾಫ್ಟ್ ವೇರ್ ಕಂಪನಿಗಳಿಗೆ ಈ ಸಲಹೆ ನೀಡಿದ್ದಾರೆ.

ಭಾರತೀಯ ಸಾಫ್ಟ್‌ವೇರ್ ಕಂಪನಿಗಳು ಅಮೆರಿಕದಲ್ಲಿ ಅಮೆರಿಕನ್ನರನ್ನು, ಕೆನಡಾದಲ್ಲಿ ಕೆನಡಾ ಜನರನ್ನು, ಬ್ರಿಟನ್ ನಲ್ಲಿ ಬ್ರಿಟೀಷರನ್ನು ನೇಮಕ ಮಾಡಿಕೊಳ್ಳಬೇಕು. ಹಾಗಾದಾಗಲೇ ನಾವು ನಿಜವಾದ ಮಲ್ಟಿ ನ್ಯಾಷನಲ್ ಕಂಪನಿಗಳಾಗಲು ಸಾಧ್ಯ. ಹೀಗಾಗಿ ನಾವು ಹೆಚ್-1ಬಿ ವೀಸಾ ಬಳಸಿ ಹೆಚ್ಚು ಹೆಚ್ಚು ಭಾರತೀಯರನ್ನು ಸೇವೆ ನೀಡಲು ಆ ದೇಶಗಳಿಗೆ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ಮೂರ್ತಿ ಹೇಳಿದರು.

English Summary: Indian software companies need to stop sending people on H-1B visas and focus on local hiring in the US, Infosys co-founder N R Narayana Murthy said.

Loading...

Leave a Reply

Your email address will not be published.