delhi-university-student

ಬಸ್ಸಿನಲ್ಲಿ ಹಸ್ತಮೈಥುನದಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ವಿದ್ಯಾರ್ಥಿನಿಯ ದೂರು

ನವದೆಹಲಿ: ಚಲಿಸುತ್ತಿದ್ದ ಬಸ್ ನಲ್ಲಿ ತನ್ನ ಪಕ್ಕ ಕೂತಿದ್ದ ವ್ಯಕ್ತಿಯೊಬ್ಬ ಹಸ್ತಮೈಥುನದಲ್ಲಿ ತೊಡಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೋರ್ವರು ದೂರು ದಾಖಲಿಸಿದ್ದಾರೆ. ಬಸ್ ನಲ್ಲಿ ತನ್ನ ಸೊಂಟವನ್ನು ಪದೇ ಪದೇ ಮುಟ್ಟಲು ವ್ಯಕ್ತಿ ಯತ್ನಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫೆಬ್ರವರಿ 7 ರಂದು ವಸಂತ್ ವಿಲೇಜ್ ಮತ್ತು ಐಐಟಿ ಗೇಟ್ ನಡುವೆ ಈ ಘಟನೆ ನಡೆದಿದ್ದು, ಮೊದಲು ವಿದ್ಯಾರ್ಥಿನಿ ತನ್ನ ಪಕ್ಕ ಕೂತ ಸಹ ಪ್ರಯಾಣಿಕನಿಗೆ ಎಚ್ಚರಿಸಿದ್ದಾರೆ. ಆದರೆ ಸುಮ್ಮನಾಗದ ಆತ ತನ್ನ ಆಟವನ್ನು ಮುಂದುವರೆಸಿದ್ದಾನೆ, ಅಲ್ಲಿದ್ದ ಇತರೆ ಸಹ ಪ್ರಯಾಣಿಕರೂ ಈ ವಿಷಯವನ್ನು ಅವರು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷಿಸಿದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ರಾಹುಲ್ ಭಾಷಣ ಮಾಡುತ್ತಿದ್ದರೆ, ನಿದ್ದೆ ಜಾರಿದ್ದ ಸಿದ್ದರಾಮಯ್ಯ, ಪರಮೇಶ್ವರ್

ಕಾಮಿ ಪ್ರಯಾಣಿಕ ತನ್ನ ವರಸೆಯನ್ನು ಮುಂದುವರೆಸಿದಾಗ ವಿದ್ಯಾರ್ಥಿನಿ ತನ್ನ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾಳೆ. ನಂತರ ಘಟನೆಯ ಕುರಿತು ವಿವರಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು, ಇಂತಹ ಕೃತ್ಯಗಳನ್ನು ಲೈಂಗಿಕ ಕಿರುಕುಳ ಎಂದು ಜನ ಪರಿಗಣಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.

Get Latest updates on WhatsApp. Send ‘Subscribe’ to 8550851559