ಮೋದಿ ರ್ಯಾಲಿಗೆ ಬಾಂಬ್ ಬೆದರಿಕೆ, ದೆಹಲಿ ವಿವಿ ವಿದ್ಯಾರ್ಥಿ ಬಂಧನ

ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ರದ್ದು ಮಾಡಿದ ಕ್ರಮಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ, ಉತ್ತರಪ್ರದೇಶದಲ್ಲಿ ಮೋದಿ ಪಾಲ್ಗೊಳ್ಳುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಬಾಂಬ್ ಸ್ಪೋಟಿಸುತ್ತವೆ ಎಂದು ಸುಳ್ಳು ಬೆದರಿಕೆ ಹಾಕಿದ್ದಾನೆ. ಹಾಗೆ ಫೋನ್ ಮಾಡಿದ ದೆಹಲಿ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಎಂಬ ವಿದ್ಯಾರ್ಥಿ ಸೋಮವಾರ ಮಧ್ಯಾಹ್ನ 12:30 ರ ವೇಳೆಯಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಆಡಿದ್ದ. ಹೀಗಾಗಿ ಎಚ್ಚರಗೊಂಡ ಪೊಲೀಸರು ಮಾವು ಬಳಿ ಭದ್ರತೆಯನ್ನು ಬಿಗಿಗೊಳಿಸಿದರು. ಅದು ಸುಳ್ಳು ಬೆದರಿಕೆ ಎಂಬ ಅನುಮಾನವಿದ್ದರೂ, ಪ್ರಧಾನ ಮಂತ್ರಿ ಭಾಗವಹಿಸುತ್ತಿರುವ ರ್ಯಾಲಿ ಆದ್ದರಿಂದ ಅಧಿಕಾರಿಗಳು ಪೂರ್ಣಪ್ರಮಾಣದಲ್ಲಿ ಬಿಗಿ ಭದ್ರತೆ ಕೈಗೊಂಡರು. ಇಂಟೆಲಿಜೆನ್ಸ್ ಬ್ಯೂರೋ, ಎಟಿಎಸ್ ಕೂಡಾ ಕಣಕ್ಕಿಳಿದವು.

ಎಸಿಪಿ ಹುಕ್ಮಾರಾಮ್ ಈ ಕುರಿತು ತನಿಖೆ ನಡೆಸಿ ದೀಪಕ್(21) ನನ್ನು ಬಂಧಿಸಿದರು. ಆ ಕರೆ ನೈರುತ್ಯ ದೆಹಲಿಯಲ್ಲಿನ ಲಾಲ್ ಭಾಗ್ ಪ್ರದೇಶದಿಂದ ಬಂದಿದ್ದಾಗಿ ಮೊದಲು ಗುರುತಿಸಿದರು. ದೀಪಕ್ ಬಳಿ ಒಂದು ಡೈರಿಯನ್ನು ವಶಪಡಿಸಿಕೊಂಡು ನೋಡಿದಾ, ಅದರಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರವರ ಭಾಷಣಗಳನ್ನು ಬರೆದುಕೊಂಡಿದ್ದು ಕಂಡು ಬಂದಿದೆ. ಆತ ಲಾಲ್ ಭಾಗ್ ಪ್ರದೇಶದಲ್ಲಿ ವಾಸಿಸುತ್ತಾನೆ. ಉತ್ತರ ಪ್ರದೇಶದ ಅಜಂಗಢ ಆತನ ಸ್ವಂತ ಊರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಕರೆಸ್ಪಾಂಡೆನ್ಸ್ ಕೋರ್ಸ್ ಮಾಡುತ್ತಾ ತಮ್ಮ ಸಂಬಂಧಿಕರ ಮನೆಯಲ್ಲಿ ಇರುತ್ತಿದ್ದಾನೆ. ರ್ಯಾಲಿಯನ್ನು ಭಗ್ನಗೊಳಿಸಲು ತಾನ ಆ ಫೋನ್ ಕರೆ ಮಾಡಿದ್ದಾಗಿ ಆತ ಹೇಳಿದ್ದಾನೆ.