ಗೋರಕ್ಷಣೆಗಾಗಿ ಪೆಟ್ರೋಲ್ ಮೇಲೆ ಸೆಸ್… ಸುಬ್ರಮಣ್ಯಸ್ವಾಮಿ ಪ್ರಸ್ತಾವನೆ

ಗೋರಕ್ಷಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ದೇಶಾದ್ಯಂತ ಇರುವ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡಲು ಪೆಟ್ರೋಲ್ ಮೇಲೆ ಸೆಸ್ ವಿಧಿಸಬೇಕು ಎಂದು ಹೇಳಿದ್ದಾರೆ. ಗೋ ರಕ್ಷಣೆ ಹೆಸರಿನಲ್ಲಿ ವಿರಾಟ್ ಹಿಂದೂಸ್ತಾನ್ ಸಂಘಟನೆ ಭಾನುವಾರ ನಡೆಸಿದ ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಸ್ವಾಮಿ ಪಾಲ್ಗೊಂಡು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಈ ಪ್ರಸ್ತಾವನೆಯನ್ನಿಟ್ಟಿದ್ದಾರೆ. 1962 ರಲ್ಲಿ ಭಾರತದ ಮೇಲೆ ಚೀನಾ ದಾಳಿ ನಡೆಸಿದಾಗ, ರಕ್ಷಣಾ ನಿಧಿಗಾಗಿ ಒಂದು ಮನವಿಯನ್ನು ಮಾಡಿದ್ದೆವು. ಸದ್ಯ ನಮ್ಮ ದೇಶ ಅಂತಹುದೇ ಪರಿಸ್ಥಿತಿಯಲ್ಲಿದೆ. ಗೋಶಾಲೆಗಳಿಗಾಗಿ ಪೆಟ್ರೋಲ್ ಮೇಲೆ 1 ರೂಪಾಯಿ ಸೆಸ್ ಕೇಳಿದರೆ, ದೇಶಕ್ಕೆ ಹಣದ ಕೊರತೆಯಿರುವುದಿಲ್ಲ ಎಂದು ಸ್ವಾಮಿ ಅಭಿಪ್ರಾಯಪಟ್ಟರು.

ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರಿಗೆ ಈ ತೆರಿಗೆ ಅನ್ವಯವಾಗುತ್ತದೆ. ಗೋರಕ್ಷಕರು ಉತ್ತಮ ಸೇವೆ ನೀಡುತ್ತಿದ್ದಾರೆ, ಅವರಿಗೆ ನಾವು ಪ್ರಮಾಣಪತ್ರ ನೀಡಲೇಬೇಕು ಎಂದು ವಿಶ್ವ ಹಿಂದೂ ಪರಿಷತ್ ಇಂಟರ್ನ್ಯಾಷನಲ್ ಜನರಲ್ ಸೆಕ್ರಟರಿ ಸುರೇಂದ್ರ ಜೈನ್ ಹೇಳಿದರು. ಗೋವುಗಳಿಗಾಗಿ ಅಭಯಾರಣ್ಯ ರಚಿಸಬೇಕು, ಟೈಗರ್ ಅಭಯಾರಣ್ಯದಂತೆ ಇದನ್ನು ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಪ್ರಜೆಗಳು ಒತ್ತಾಯಿಸಬೇಕು ಎಂದು ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡ ಗೃಹ ಸಚಿವಾಲಯದ ರಾಜ್ಯ ಸಚಿವ ಹನ್ಸುರಾಜ್ ಅಹಿರ್ ಹೇಳಿದರು.

ಇನ್ನು ಉರ್ಜಾ ವರ್ಲ್ಡ್ ಫೌಂಡೇಷನ್ ಸ್ವಾಮಿ ಅರಿಹಂತ್ ಮಾತನಾಡಿ, ಗೋವುಗಳ ರಕ್ಷಣೆಗಾಗಿ ಶಾಲಾ ಪಠ್ಯಗಳಲ್ಲಿ ಅಧ್ಯಾಯಗಳನ್ನು ಸೇರಿಸಬೇಕು ಎಂದು ಹೇಳಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache