ಅರ್ನಾಬ್ “ರಿಪಬ್ಲಿಕ್” ಗೆ ಆರಂಭದಲ್ಲೇ ಸ್ವಾಮಿಯಿಂದ ವಿಘ್ನ

ಟೈಮ್ಸ್ ನೌ ಚಾನೆಲ್ ಮಾಜಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಆರಂಭಿಸುತ್ತಿರುವ ಹೊಸ ನ್ಯೂಸ್ ಚಾನೆಲ್ ಗೆ “ರಿಪಬ್ಲಿಕ್” ಎಂದು ಹೆಸರಿಟ್ಟಿರುವುದನ್ನು ಪ್ರಶ್ನಿಸಿ, ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಇಂತಹ ಹೆಸರು ಮತ್ತು ಲಾಂಛನಗಳನ್ನು ಎಂಬ್ಲಮ್ಸ್ ಅಂಡ್ ನೇಮ್ಸ್ ಆಕ್ಟ್ 1950 ಪ್ರಕಾರ ವೃತ್ತಿಪರ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದೆ ಎಂದು ಜನವರಿ 13 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹಾಗಾಗಿ “ರಿಪಬ್ಲಿಕ್” ಹೆಸರಿನ ಚಾನೆಲ್ ಆರಂಭಿಸಲು ಪರವಾನಗಿ ನೀಡುವುದು ಕಾನೂನು ವಿರುದ್ಧ ಮತ್ತು ಕಾನೂನಿನ ನೇರ ಉಲ್ಲಂಘನೆಯಾಗುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಟೌಮ್ಸ್ ನೌ ಸುದ್ದಿ ವಾಹಿನಿಯಲ್ಲಿ ಪ್ರೈಮ್ ಟೈಮ್ ಡಿಬೇಟ್ ಕಾರ್ಯಕರ್ಮದ ಮೂಲಕ ಪ್ರಸಿದ್ಧರಾದವರು. ನಂತರ ಅವರು ಟೈಮ್ಸ್ ನೌ ಗೆ ರಾಜೀನಾಮೆ ನೀಡಿ ಅವರದೇ ಆದ ಹೊಸ ಸುದ್ದಿವಾಹಿನಿಯನ್ನು ಆರಂಭಿಸುವುದಾಗಿ ಹೇಳಿದ್ದರು. ಸದ್ಯ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅದಕ್ಕೂ ಮುನ್ನ ಚಾನೆಲ್ ಆರಂಭಿಸಬೇಕೆಂದು ಅರ್ನಾಬ್ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಟ್ವಿಟರ್ ಮತ್ತು ಫೇಸ್ಬುಕ್ ಮೂಲಕ “ರಿಪಬ್ಲಿಕ್” ಹೆಸರಲ್ಲಿ ಚಾನೆಲ್ ಸಕ್ರಿಯವಾಗಿದ್ದು ರಿಪಬ್ಲಿಕ್ ಹೆಸರಿನ ಫೇಸ್ಬುಕ್ ಖಾತೆಗೆ 1 ಲಕ್ಷ ಹಿಂಬಾಲಕರಿದ್ದಾರೆ.

“ರಿಪಬ್ಲಿಕ್” ಎಆರ್‌ಜಿ ಔಟ್‌ ಲೈನರ್ ಎಂಬ ಕಂಪನಿಯ ಭಾಗವಾಗಿದ್ದು, ಅರ್ನಾಬ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನವೆಂಬರ್ 19 ರಂದು ನೇಮಕವಾಗಿದ್ದಾರೆ. ಚಾನೆಲ್ ಹೂಡಿಕೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರದೇ ಸಿಂಹಪಾಲಾಗಿದ್ದು, ಕಂಪನಿಯ ನಿರ್ದೇಶಕರೂ ಆಗಿದ್ದಾರೆ. 30 ಕೋಟಿಗೂ ಅಧಿಕ ಮೊತ್ತವನ್ನು ಈ ಕಂಪನಿಯಲ್ಲಿ ರಾಜೀವ್ ಚಂದ್ರಶೇಖರ್ ಹೂಡಿಕೆ ಮಾಡಿದ್ದಾರೆ.

Rajya Sabha member and BJP leader Subramanian Swamy has opposed to use the name “Republic” by Arnab Goswami’s proposed TV channel.

He said “Utilization of the name  ‘Republic’ for business or professional reasons is contrary to law and a direct breach of the Emblems and Names (Prevention of Improper Use) Act, 1950.”