ಮಾರ್ಚ್ ವೇಳೆಗೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಸ್ಥಗಿತ – News Mirchi

ಮಾರ್ಚ್ ವೇಳೆಗೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಸ್ಥಗಿತ

ಅಡುಗೆ ಅನಿಲ ಸಿಲಿಂಡರ್ ಗಳಿಗೆ ನೀಡುತ್ತಿರುವ ಸಬ್ಸಿಡಿಗಳನ್ನು ಮುಂದಿನ ಮಾರ್ಚ್ ತಿಂಗಳ ವೇಳೆಗೆ ಕೈಬಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೀರ್ಮಾನವೊಂದನ್ನು ಕೈಗೊಂಡಿದೆ. ಸಬ್ಸಿಡಿ ಭಾರವನ್ನು ಕಡಿಮೆ ಮಾಡಲು ಈಗಾಗಲೇ ತಿಂಗಳಿಗೆ ರೂ.2 ರಂತೆ ಅಡುಗೆ ಅನಿಲ ದರಗಳನ್ನು ಹೆಚ್ಚಳ ಮಾಡುತ್ತಿದ್ದಾರೆ. ಸರ್ಕಾರದ ಹೊಸ ಆದೇಶದಿಂದ ಗ್ಯಾಸ್ ಸಿಲಿಂಡರ್ ದರಗಳನ್ನು ಇನ್ನುಮುಂದೆ ರೂ.4 ರಂತೆ ಹೆಚ್ಚಳ ಮಾಡಲಿದ್ದಾರೆ. ಈ ಸಂಬಂಧ ತೈಲಕಂಪನಿಗಳಿಗೆ ಆದೇಶಗಳು ತಲುಪಿವೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯವನ್ನ ಸೋಮವಾರ ಲೋಕಸಭೆಗೆ ಲಿಖಿತಪೂರ್ವಕ ಉತ್ತರದಲ್ಲಿ ತಿಳಿಸಿದ್ದಾರೆ. ದರಗಳನ್ನು ಕ್ರಮೇಣ ಹೆಚ್ಚಳ ಮಾಡುತ್ತಾ, ಮಾರ್ಚ್ ವೇಳೆಗೆ ಮಾರುಕಟ್ಟೆ ದರಗಳಿಗೆ ಅಡುಗೆ ಅನಿಲವನ್ನು ಮಾರುವಂತೆ ಕೇಂದ್ರ ಹೆಜ್ಜೆಯಿಡುತ್ತಿದೆ.

ನನ್ನ ಮಗ ತಪ್ಪು ಮಾಡಿದ್ದಾನೆ, ಗೂಗಲ್ ನಲ್ಲಿ ಉದ್ಯೋಗ ಸುಳ್ಳು

ಸದ್ಯ ಪ್ರತಿ ಕುಟುಂಬಕ್ಕೆ ಸಬ್ಸಿಡಿ ದರದ ಮೇಲೆ 12 ಸಿಲಿಂಡರ್ ಗಳನ್ನು ಹೊಂದುವ ಅವಕಾಶವಿದೆ. ಅದಕ್ಕಿಂತ ಹೆಚ್ಚು ಬೇಕೆಂದರೆ ಮಾರುಕಟ್ಟೆ ದರದಂತೆ ಖರೀದಿಸಬೇಕು. ಇದೀಗ ದೆಹಲಿ ದರಗಳ ಪ್ರಕಾರ ಸಬ್ಸಿಡಿ ಸಿಲಿಂಡರ್ ದರ ರೂ.477.46 ಇದೆ. ಕಳೆದ ಜೂನ್ ನಲ್ಲಿ ಇದು ರೂ.419.18 ಕ್ಕೆ ಲಭಿಸುತ್ತಿತ್ತು. ತಕ್ಷಣದಿಂದಲೇ ಸಂಪೂರ್ಣ ಸಬ್ಸಿಡಿಯನ್ನು ಹಿಂತೆಗೆದುಕೊಂಡರೆ ಒಂದು ಸಿಲಿಂಡರ್ ಗೆ ರೂ.564 ತೆರಬೇಕಾಗುತ್ತದೆ.

ದೇಶದಲ್ಲಿ ಸಬ್ಸಿಡಿ ದರದಲ್ಲಿ ಅಡುಗೆ ಅನಿಲವನ್ನು ಖರೀದಿಸುತ್ತಿರುವವರು 18.11 ಕೋಟಿ ಜನರಿದ್ದಾರೆ. ಇವರಲ್ಲಿ ಉಚಿತ ಸಂಪರ್ಕ ಹೊಂದಿರುವ ಬಡ ಮಹಿಳೆಯರು 2.5 ಕೋಟಿಯಷ್ಟಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಇವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಇವರಲ್ಲದೆ ಸಬ್ಸಿಡಿ ಇಲ್ಲದೆ ಅಡುಗೆ ಅನಿಲ ಬಳಸುತ್ತಿರುವವರು 2.66 ಕೋಟಿ ಜನರಿದ್ದಾರೆ.

ಫೇಸ್ಬುಕ್ಕಿಗೆ ತಲೆನೋವಾದ ಚಾಟ್ ಬಾಟ್ಸ್ ನ ಹೊಸ ಭಾಷೆ!

Loading...