ರಂಜಾನ್ ವೇಳೆ ಮೆಕ್ಕಾ ಮಸೀದಿಯಲ್ಲಿ ಉಗ್ರರ ದಾಳಿ ಸಂಚು ವಿಫಲ |News Mirchi

ರಂಜಾನ್ ವೇಳೆ ಮೆಕ್ಕಾ ಮಸೀದಿಯಲ್ಲಿ ಉಗ್ರರ ದಾಳಿ ಸಂಚು ವಿಫಲ

ಮೆಕ್ಕಾ: ಸೌದಿ ಅರೇಬಿಯಾದಲ್ಲಿ ಮುಸ್ಲಿಮರ ಪವಿತ್ರ ಮೆಕ್ಕಾ ಮಸೀದಿ ಬಳಿ ಭಯೋತ್ಪಾದಕರು ದಾಳಿ ನಡೆಸಲು ನಡೆಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಮಸೀದಿ ಮೇಲೆ ಉಗ್ರರು ದಾಳಿ ನಡೆಸಲು ಸಂಚು ನಡೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಮೆಕ್ಕಾ ನಗರದಲ್ಲಿನ ಕಟ್ಟಡವೊಂದರಲ್ಲಿ ಅಡಗಿದ್ದ ಉಗ್ರರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಉಗ್ರನೊಬ್ಬ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದು, ಐವರು ಪೊಲೀಸರು ಗಾಯಗೊಂಡಿದ್ದಾರೆ. ಐವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ ಈದ್ ನಮಾಜ್ ಗಾಗಿ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ದಾಳಿ ನಡೆಸಲು ಸಂಚು ನಡೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

Loading...
loading...
error: Content is protected !!