ಮಂಡ್ಯದಲ್ಲಿ ‘ಈ ಬಾರಿ ಬಿಜೆಪಿ’ ಗೋಡೆ ಬರಹ ಪ್ರಚಾರಕ್ಕೆ ಚಾಲನೆ

ಮಂಡ್ಯ: ವಿಧಾನಸಭೆ ಚುನಾವಣೆ ಪ್ರಚಾರದ ಭಾಗವಾಗಿ ಮಂಡ್ಯದಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ‘ಈ ಬಾರಿ ಬಿಜೆಪಿ’ ಎಂಬ ಗೋಡೆ ಬರಹ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕ್ಷೇತ್ರದಾದ್ಯಂತ ಕಾರ್ಯಕರ್ತರ ಮನೆಗಳ ಮೇಲೆ ಈ ಗೋಡೆ ಬರಹಗಳ ಮೂಲಕ ಜನರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಹೊಸಹಳ್ಳಿ ಶಿವು, ನರೇಂದ್ರ ಮೋದಿ ವಿಚಾರ್ ಮಂಚ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್, ಮಹಾಂತಪ್ಪ, ಭರತ್, ರಮೇಶ್ ಚಿನ್ನಸ್ವಾಮಿ ಮುಂತಾದವರು ಹಾಜರಿದ್ದರು.

ನಿಮ್ಮ ಯೋಜನೆಗೆ ನಮ್ಮ ಹಣ ಕೇಳಬೇಡಿ ಎಂದ ಮಮತಾ ಬ್ಯಾನರ್ಜಿ

ಈ ಸಂಧರ್ಭದಲ್ಲಿ ಸಿಟಿ ಮಂಜುನಾಥ್ ಮಾತನಾಡಿ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಒಲವಿದ್ದು ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ. ಮಂಡ್ಯ ಕ್ಷೇತ್ರದ ಹಾಲಿ ಶಾಸಕಾರದ ಅಂಬರೀಷ್ ಅವರು ಮತದಾರರ ಕೈಗೆ ಸಿಗುತ್ತಿಲ್ಲ, ಮಂಡ್ಯ ಕ್ಷೇತ್ರದ ಅಭಿವೃದ್ಧಿ ಕೆಲಸಗಳಾಗಿಲ್ಲ, ಮಂಡ್ಯ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿ ಚಂದ್ರ ಗ್ರಹದಲ್ಲಿನ ಗುಂಡಿಗಳಂತಾಗಿವೆ, ಜಿಲ್ಲೆಯಲ್ಲಿ ನಿರಂತರವಾಗಿ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಅಂಬರೀಷ್ ಅವರು ನಿರ್ಲಕ್ಷವಹಿಸಿ ಕಲಾವಿದರ ಭವನದ ಉದ್ಘಾಟನೆಯಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ನಾಪತ್ತೆಯಾಗುತ್ತಿದ್ದಾರೆ. ಇದರಿಂದಾಗಿ ಬೇಸತ್ತ ರೈತರು, ಸಾರ್ವಜನಿಕರು ಕಚೇರಿಗಳ ಮುಂದೆ ನಿಂತು ಹಿಡಿ ಶಾಪ ಹಾಕುತ್ತಿದ್ದಾರೆ. ಉದ್ಯೋಗ ಅರಸಿ ನಿರುದ್ಯೋಗಿ ಯುವಕರು ಬೇರೆ ನಗರಗಳಿಗೆ ಗುಳೇ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನತಾದಳ ಮತ್ತು ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತಿರುವ ಮತದಾರರು ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಶವಿದೆ ಎಂದರು.

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

ಈ ಬಾರಿ ಖಂಡಿತ ಮಂಡ್ಯ ಜಿಲ್ಲೆಯಿಂದ ಕನಿಷ್ಠ ನಾಲ್ಕು ಮಂದಿ ಬಿಜೆಪಿ ಅಭ್ಯರ್ಥಿಗಳನ್ನು ಇಲ್ಲಿನ ಜನರು ಆರಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಕ್ಷೇತ್ರದಲ್ಲಿ ಸುಮಾರು 2000 ಕಡೆ ‘ಈ ಬಾರಿ ಬಿಜೆಪಿ’ ಎಂಬ ಗೋಡೆಬರಹಗಳನ್ನು ಬರೆಯಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ರೈತ ವಿರೋಧಿ ನೀತಿ, ಅತಿಯಾದ ಓಲೈಕೆ ಬಗ್ಗೆ ಮನೆ ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು, ಜೊತೆಗೆ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಾಗುವುದು ಎಂದರು

Get Latest updates on WhatsApp. Send ‘Subscribe’ to 8550851559