ಬಿಸಿಸಿಐ ಗೆ ಹೊಸ ಬಾಸ್‌ಗಳ ನೇಮಕ

ಕ್ರಿಕೆಟ್ ನಿಯಂತ್ರಣ ಮಂಡಳಿ()ಯ ದೈನಂದಿನ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ನಾಲ್ಕು ಜನರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ. ಆಡಳಿತ ಮಂಡಳಿಯ ಸದಸ್ಯರಾಗಿ ಮಾಜಿ ಕಾಗ್ ಮುಖ್ಯಸ್ಥ ವಿನೋದ್ ರಾಯ್, ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ, ಐಡಿಎಫ್‌ಸಿ ಅಧಿಕಾರಿ ವಿಕ್ರಮ್ ಲಿಮಾಯೆ, ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಅವರನ್ನು ನೇಮಕ ಮಾಡಿದೆ. ಈ ಕಮಿಟಿಯ ನೇತೃತ್ವವನ್ನು ವಿನೋದ್ ರಾಯ್ ಅವರು ವಹಿಸಿಕೊಂಡಿದ್ದಾರೆ. ಈ ಸಂಬಂಧ ಸೋಮವಾರ ಆದೇಶ ಜಾರಿ ಮಾಡಿದೆ.

ಹೊಸ ಸಮಿತಿಯಲ್ಲಿ ಟೀಮ್ ಇಂಡಿಯಾದ ಯಾವುದೇ ಕ್ರಿಕೆಟಿಗರಿಗೆ, ಮಂಡಳಿಯ ಮಾಜಿ ಅಧಿಕಾರಿಗಳಿಗೆ ಸ್ಥಾನ ಸಿಕ್ಕಿಲ್ಲ. ಮಾಜಿ ಕ್ರಿಕೆಟರ್ ಡಯಾನಾಗೆ ಮಾತ್ರ ಸ್ಥಾನ ಸಿಕ್ಕಿದೆ. ಉಳಿದ ಮೂರೂ ಜನ ವಿವಿಧ ಕ್ಷೇತ್ರಗಳಿಗೆ ಸೇರಿದವರು. ಈ ಕಮಿಟಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿರಸ್ಕರಿಸಿದೆ.

ಲೋಧಾ ಕಮಿಟಿಯ ಮಾಡಿದ್ದ ಶಿಫಾರಸುಗಳನ್ನು ಜಾರಿ ಮಾಡದ ಕಾರಣ ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಹುದ್ದೆಗಳಿಂದ ತೊಲಗಿಸಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐನ ವ್ಯವಹಾರಗಳನ್ನು ನೋಡಿಕೊಳ್ಳಲು ಈ ಕಮಿಟಿಯನ್ನು ನೇಮಕ ಮಾಡಿದೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache