ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬಂತಿದೆ: ಸುಪ್ರೀಂ – News Mirchi

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬಂತಿದೆ: ಸುಪ್ರೀಂ

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಚುನಾವಣೆ ಮುಗಿಯುವವರೆಗೂ ಕೇಂದ್ರ ಬಡ್ಜೆಟ್ ಮಂಡನೆಯನ್ನು ಮುಂದೂಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಐದು ರಾಜ್ಯಗಳ ಮತದಾರರ ಮೇಲೆ ಬಡ್ಜೆಟ್ ಪ್ರಭಾವ ಬೀರುತ್ತದೆ ಎಂಬುದಕ್ಕೆ ಯಾವ ನಿರ್ದಿಷ್ಟ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಜೆ.ಎಸ್.ಖೇಹರ್ ಅವರ ನೇತೃತ್ವದ ನ್ಯಾಯಪೀಠ, ಈ ಸಂಬಂಧ ದಾಖಲಾಗಿದ್ದ ಪಿಟೀಷನ್ ತಿರಸ್ಕರಿಸಿದೆ.

ಹೀಗಾಗಿ ಫೆಬ್ರವರಿ 1 ರಂದು ಕೇಂದ್ರ ಬಡ್ಜೆಟ್ ಮಂಡನೆಗೆ ಹಾದಿ ಸುಗಮವಾಗಿದೆ. ಫೆಬ್ರವರಿ 1 ರಂದು ಮಂಡಿಸಬೇಕಿದ್ದ 2017-18 ಬಡ್ಜೆಟ್ ಅನ್ನು ಏಪ್ರಿಲ್ 1 ರಂದು ಮಂಡಿಸುವಂತೆ ಆದೇಶಿಸಬೇಕು ಎಂದು ಕೋರಿ ವಕೀಲ ಎಂ.ಎಲ್.ಶರ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಈ ಚುನಾಣೆಯಾಗುವವರೆಗೂ ಯಾವುದೇ ಜನೋಪಯೋಗಿ ಯೋಜನೆಗಳನ್ನು ಪ್ರಕಟಿಸದಂತೆ ಆದೇಶಿಸಬೇಕು ಎಂದು ಪಿಟೀಷನ್ ನಲ್ಲಿ ಮನವಿ ಮಾಡಲಾಗಿತ್ತು. ಆದರೆ ಸಂವಿಧಾನದ ನಿಯಮಗಳನ್ನು ಉಲ್ಲೇಖಿಸಿ, ನಿರಂತರವಾಗಿ ನಡೆಯುವ ಚುನಾವಣೆಗಳ ಮೇಲೆ ಕೇಂದ್ರ ಬಡ್ಜೆಟ್ ಮಂಡನೆ ಅವಲಂಬಿಸಿರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅರ್ಜಿದಾರರ ವಾದ ನೋಡುತ್ತಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಚುಮಾವಣೆಯಲ್ಲಿ ಸ್ಪರ್ಧಿಸಬಾರದು ಎಂಬಂತಿದೆ ಎಂದು ಎಂದು ಹೇಳಿತು.

Loading...

Leave a Reply

Your email address will not be published.