ಅಯೋಧ್ಯೆ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ |News Mirchi

ಅಯೋಧ್ಯೆ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ

ಅಯೋಧ್ಯೆ ವಿವಾದಿತ ಜಾಗದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 8ಕ್ಕೆ ಮುಂದೂಡಿದೆ. ಮಂಗಳವಾರ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಎರಡೂ ಕಡೆ ವಾದಗಳನ್ನು ಆಲಿಸಿತು.

ಸುನ್ನಿ ವಕ್ಫ್ ಬೋರ್ಡ್ ಪರವಾಗಿ ಕಪಿಲ್ ಸಿಬಲ್, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳು ತಮಗೆ ಸಿಕ್ಕಿಲ್ಲವೆಂದು ಹೇಳಿದರು. ಪ್ರಕರಣದ ವಿಚಾರಣೆಯನ್ನು ಮುಂದಿನ ಲೋಕಸಭೆ ಚುನಾವಣೆ ನಂತರ ಕೈಗೆತ್ತಿಕೊಳ್ಳಲು ಕಪಿಲ್ ಸಿಬಲ್ ಮನವಿ ಮಾಡಿದರು. ಇಲ್ಲವೆಂದರೆ ಚುನಾವಣಾ ಫಲಿತಾಂಶದ ಮೇಲೆ ತೀರ್ಪು ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಅವರು ವಾದಿಸಿದರು.

ಇವಿಎಂ ಬಳಸಿದರೆ, ಕರ್ನಾಟಕ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

ಕಪಿಲ್ ಸಿಬಲ್ ವಾದ ಆಲಿಸಿದ ಮೂವುರ ನ್ಯಾಯಾಧೀಶರ ಪೀಠ, ಚುನಾವಣೆಯವರೆಗೂ ತೀರ್ಪು ಮುಂದೂಡುವ ಮನವಿಯನ್ನು ತಿರಸ್ಕರಿಸಿತು. ಭೂವಿವಾದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳ ಪತ್ರಗಳನ್ನು ನೀಡಿರುವುದಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ನ್ಯಾಯಪೀಠಕ್ಕೆ ವಿವರಿಸಿದರು. ನಂತರ ಪ್ರಕರಣವನ್ನು ಫೆಬ್ರವರಿ 8, 2018ಕ್ಕೆ ಮುಂದೂಡುತ್ತಿರುವುದಾಗಿ ನ್ಯಾಯಪೀಠ ಪ್ರಕಟಿಸಿದೆ.

ಸೋಲಾರ್ ಕ್ಷೇತ್ರಕ್ಕೆ ಪತಂಜಲಿ, ಚೀನಾದೊಂದಿಗೆ ದರ ಸಮರಕ್ಕೆ ಸಿದ್ಧವಂತೆ

2010 ರಲ್ಲಿ ವಿವಾದಿತ ಪ್ರದೇಶವನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ ಮಂದಿರಗಳಿಗೆ ಸಮಾನವಾಗಿ ಹಂಚಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ 13 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿವೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!