ನ್ಯಾಯಾಧೀಶರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ವ್ಯಕ್ತಿಗೆ ಶಾಕಿಂಗ್ ತೀರ್ಪು

***

ನವದೆಹಲಿ: ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಕ್ರಿಮಿನಲ್ ಪಿಟೀಷನ್ ದಾಖಲಿಸಿದ್ದ ರಷೀದ್ ಅಲಿ ಎಂಬ ವ್ಯಕ್ತಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಶಾಕ್ ನೀಡಿದೆ. ಅನಗತ್ಯವಾಗಿ ಪಿಟೀಷನ್ ಸಲ್ಲಿಸಿ ನ್ಯಾಯಾಲಯದ ಸಮಯ ಹಾಳುಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ. ಸುಪ್ರೀಂ ಕೊರ್ಟ್ ಸೇರಿದಂತೆ ದೇಶದ ಎಲ್ಲಾ ಹೈಕೋರ್ಟ್ ಗಳಲ್ಲಿಯೂ ರಷೀದ್ ಅಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದಂತೆ ಜಸ್ಟೀಸ್ ಖೇಹರ್, ಜಸ್ಟೀಸ್ ಡಿವೈ ಚಂದ್ರಚೂಡ್ ಅವರ ನ್ಯಾಯಪೀಠ ತೀರ್ಪು ನಿಡಿದೆ.

ಅಷ್ಟೇ ಅಲ್ಲದೆ ಮಾರ್ಚ್ 27ರಂದು ಪಿಟೀಷನರ್ ಗೆ ಕೋರ್ಟ್ ವಿಧಿಸಿದ್ದ ರೂ.1 ಲಕ್ಷ ದಂಡವನ್ನು ನ್ಯಾಯಪೀಠ ಸಮರ್ಥಿಸಿಕೊಂಡಿದೆ. ಈ ದಂಡದ ಮೊತ್ತವನ್ನು ಪಾವತಿಸಲು ಮತ್ತೆ ನಾಲ್ಕು ವಾರಗಳ ಗಡುವು ನೀಡಿದೆ. ಪ್ರಕರಣವೊಂದರ ವಿಚಾರಣೆಯಲ್ಲಿ ತನಗೆ ವಿರುದ್ಧವಾಗಿ ತೀರ್ಪು ನೀಡಿದ ಕಾರಣಕ್ಕೆ ಸಿಟ್ಟಿಂಗ್ ಜಡ್ಜ್ ಗಳ ವಿರುದ್ಧ ರಷೀದ್ ಕ್ರಿಮಿನಲ್ ಪಿಟೀಷನ್ ದಾಖಲಿಸಿದ್ದರು.