ಕಟ್ಟಡದಿಂದ ಜಿಗಿದು ವೈದ್ಯನ ಆತ್ಮಹತ್ಯೆc – News Mirchi

ಕಟ್ಟಡದಿಂದ ಜಿಗಿದು ವೈದ್ಯನ ಆತ್ಮಹತ್ಯೆc

ಬೆಂಗಳೂರು: ವೈದ್ಯರೊಬ್ಬರು 10 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ. 56 ವರ್ಷದ ಡಾ. ಅಶೋಕ್ ಕೌಲ್ ಎಂಬ ಬೊಮ್ಮಸಂದ್ರದಲ್ಲಿರುವ ಸ್ಪರ್ಶ್ ಅಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಆತ್ಮಹತ್ಯೆ ಮಾಡಿಕೊಂಡವರು.

ಪೊಲೀಸ್ ಮೂಲಗಳ ಪ್ರಕಾರ ಮೃತ ಅಶೋಕ್ ಕೌಲ್, ಹೆಚ್‌ಎಸ್‌ಆರ್ ಲೇಔಟ್ ನಲ್ಲಿ ಸೋಮಸುಂದರಪಾಳ್ಯದಲ್ಲಿರುವ ಶೋಭಾ ಡ್ಯಾಫೋಡಿಲ್ ಅಪಾರ್ಟ್ಮೆಮಟ್ ನಲ್ಲಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಿದ್ದರು.

ಮಗಳನ್ನು ಡ್ರಾಪ್ ಮಾಡಲು ಮನೆಗೆ ಬಂದ ಅಶೋಕ್ ಗಾಬರಿಯಿಂದಿದ್ದರು. ಫ್ಲ್ಯಾಟ್ ಒಳಗೆ ಹೋಗದೆ ಲಿಫ್ಟ್ ಮೂಲಕ ಟೆರೇಸ್ ಗೆ ಹೋಗಿ ಅಲ್ಲಿಂದ ಕೆಳಗೆ ಹಾರಿದ್ದಾರೆ ಎಂದು ನೆರೆಹೊರೆಯವರು ಹೇಳಿದ್ದಾರೆ. ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳು ಶಬ್ದ ಕೇಳಿ ಹತ್ತಿರ ಹೋಗಿ ನೋಡಿದಾಗ ಅಶೋಕ್ ಬಿದ್ದು ಸಾವನ್ನಪ್ಪಿರುವುದು ತಿಳಿದುಬಂದಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!