ಈಕೆಯ ಕಣ್ಣಿನಲ್ಲಿ ಸಿಕ್ಕಿದ್ದು 27 ಕಾಂಟ್ಯಾಕ್ಟ್ ಲೆನ್ಸ್!

ವೈದ್ಯರೇ ಗಾಭರಿಯಾಗುವಂತಹ ಘಟನೆ ಲಂಡನ್ ನಲ್ಲಿ ನಡೆದಿದೆ. ಕನ್ನಡಕದ ಬದಲಿಗೆ ಬಳಸುವ ಕಾಂಟ್ಯಾಕ್ಟ್ ಲೆನ್ಸ್ ಗಳ ಬಗ್ಗೆ ನಾವು ಕೇಳಿರುತ್ತೀವಿ. ಆದರೆ ಯಾರೇ ಆಗಲೀ ಒಂದಕ್ಕಿಂತ ಹೆಚ್ಚು ಕಾಂಟಾಕ್ಟ್ ಲೆನ್ಸ್ ಧರಿಸುವುದಿಲ್ಲ. ಆದರೆ ಇಲ್ಲಿನ ಮಹಿಳೆಯೊಬ್ಬರ ಕಣ್ಣಿನಲ್ಲಿ ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್ ಗಳು ಪತ್ತೆಯಾಗಿ ವೈದ್ಯರನ್ನೇ ಆಶ್ಚರ್ಯಗೊಳಿಸಿದೆ.

ಲಂಡನ್ ನಲ್ಲಿ 67 ವರ್ಷದ ಮಹಿಳೆಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಆಕೆಯ ಕಣ್ಣುಗಳನ್ನು ಪರೀಕ್ಷಿಸಿದ ವೈದ್ಯರಿಗೆ, ಕಣ್ಣಿನಲ್ಲಿ ನೀಲಿ ಪೊರೆಗಳು ಇದ್ದುದು ಕಂಡು ಬಂದಿದೆ. ಅವುಗಳನ್ನು ನೋಡಿದವರಿಗೆ ಶಾಕ್…. ಕಣ್ಣಿನಲ್ಲಿ ಬಳಸಿದ ಕಾಂಟಾಕ್ಟ್ ಲೆನ್ಸ್ ಗಳನ್ನು ಆಕೆ ತೆಗೆದಿರಲೇ ಇಲ್ಲ ಎಂದು ವೈದ್ಯರ ಗಮನಕ್ಕೆ ಬಂದಿದೆ. ಮೊದಲು ಎರಡು ಅಥವಾ ಮೂರು ಕಾಂಟ್ಯಾಕ್ಟ್ ಲೆನ್ಸ್ ಗಳಿರಬಹುದು ಎಂದು ಭಾವಿಸಲಾಗಿತ್ತು. ಆದರೆ ತೆಗೆದಷ್ಟು ಲೆನ್ಸ್ ಗಳು ಬರುತ್ತಿದ್ದವು. ಹಾಗೆ ಕಣ್ಣಿಗೆ ಅಂಟಿಕೊಂಡ 27 ಲೆನ್ಸ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ.

ಬ್ರೇಕಿಂಗ್ ನ್ಯೂಸ್: ಜಿಯೋ ಫೀಚರ್ ಫೋನ್ ಉಚಿತ!

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸಿದ ನಂತರ ತೆಗೆಯದೇ ಇವುಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಮಹಿಳೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಘಟನೆಯನ್ನು ಇದೇ ಮೊದಲು ತಾವು ನೋಡುತ್ತಿದ್ದೇವೆ. 17 ಲೆನ್ಸ್ ಗಳು ಮುದ್ದೆಯಂತಾಗಿ ಅಂಟಿಕೊಂಡಿದ್ದವು. ಆದರೆ ಮಹಿಳೆ ಅವುಗಳನ್ನು ಗಮನಿಸದೇ ಇರುವುದು ಆಶ್ಚರ್ಯ ಎಂದು ವೈದ್ಯರು ಹೇಳಿದ್ದಾರೆ.

ಇದರಿಂದಾಗಿಯೇ ಆಕೆಗೆ ಕಣ್ಣಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಮೊದಲು 17 ಲೆನ್ಸ್ ಗಳು ಮಾತ್ರ ವೈದ್ಯರು ಪತ್ತೆ ಹಚ್ಚಲು ಸಾಧ್ಯವಾಯಿತು. ನಂತರ ಮತ್ತಷ್ಟು ಚಿಕಿತ್ಸೆ ನೀಡಿದಾಗ ಇನ್ನೂ 10 ಕಾಂಟ್ಯಾಕ್ಟ್ ಲೆನ್ಸ್ ಗಳು ಕಂಡು ಬಂದಿವೆ. ವೈದ್ಯರ ಸಲಹೆ ತೆಗೆದುಕೊಳ್ಳದೇ ಡಿಸ್ಪೋಸಬಲ್ ಕಾಂಟ್ಯಾಕ್ಟ್ ಲೆನ್ಸ್ ಬಳಸುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಹಿಂದುತ್ವದ ಅಪಪ್ರಚಾರ ತಡೆಗೆ “ಕೀಬೋರ್ಡ್ ಆರ್ಮಿ”

ಆ ಎಲ್ಲಾ ಲೆನ್ಸ್ ಗಳನ್ನು ತೆಗೆದ ಎರಡು ವಾರಗಳ ನಂತರ ಹಿಂದಿನಷ್ಟು ಕಣ್ಣಿನ ಸಮಸ್ಯೆ ಈಗಿಲ್ಲ ಎಂದು ಮಹಿಳೆ ಹೇಳಿದ್ದಾರೆ.