6 ನಿಮಿಷದಲ್ಲಿ 60 ಬಾರಿ ಸುಷ್ಮಾ ಭಾಷಣಕ್ಕೆ ಅಡ್ಡಿಪಡಿಸಿದ್ದ ಮೀರಾ ಕುಮಾರ್? – News Mirchi

6 ನಿಮಿಷದಲ್ಲಿ 60 ಬಾರಿ ಸುಷ್ಮಾ ಭಾಷಣಕ್ಕೆ ಅಡ್ಡಿಪಡಿಸಿದ್ದ ಮೀರಾ ಕುಮಾರ್?

ನವದೆಹಲಿ: ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿ ಹಾಗೂ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಸುಷ್ಮಾ ಸ್ವರಾಜ್ ಕೆಂಡ ಕಾರಿದ್ದಾರೆ. 2013 ರ ಏಪ್ರಿಲ್ ನಲ್ಲಿ ನಡೆದ ಲೋಕಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿಷಯದಲ್ಲಿ ಮೀರಾ ವರ್ತಿಸಿದ ರೀತಿಯನ್ನು ಟೀಕಿಸಿ ಸುಷ್ಮಾ ಸಾಮಾಜಿಕ ತಾಣದಲ್ಲಿ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅಂದಿನ ಮನಮೋಹನ್ ಸರ್ಕಾರದ ದೊಡ್ಡ ಹಗರಣಗಳ ಬಗ್ಗೆ ತಾವು ಮಾತನಾಡುತ್ತಿದ್ದಾಗ, ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಪದೇ ಪದೇ ಥ್ಯಾಂಕ್ಯೂ, ಆಲ್ರೈಟ್, ಆಲ್ರೈಟ್ ಎಂದು ತಮ್ಮ ಮಾತಿಗೆ ಅಡ್ಡಿಪಡಿಸಿ ಸುಷ್ಮಾ ಮಾತನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದದ್ದು ವೀಡಿಯೋದಲ್ಲಿದೆ.

ಈ ವೀಡಿಯೋ ಜೊತೆಗೆ ಈ ವಿಷಯ ಕುರಿತಂತೆ “6 ನಿಮಿಷಗಳಲ್ಲಿ 60 ಬಾರಿ ಸುಷ್ಮಾ ಭಾಷಣಕ್ಕೆ ಅಡ್ಡಿಪಡಿಸಿದ ಸ್ಪೀಕರ್” ಎಂಬ ಹೆಡ್ಲೈನ್ ನೊಂದಿಗೆ ಅಂದು ಪ್ರಕಟವಾಗಿದ್ದ ದಿನಪತ್ರಿಕೆಯ ಕ್ಲಿಪ್ ಅನ್ನು ಆ ವೀಡಿಯೋ ಜೊತೆ ಲಿಂಕ್ ಮಾಡಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯಾಗಿ ಮೀರಾಕುಮಾರ್ ಅವರ ತಟಸ್ಥ ನಿಲುವು ಹೊಂದಿರುವ ವ್ಯಕ್ತಿ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದರೆ, ಮೀರಾ ಅವರ ಧೋರಣೆಯನ್ನು ಬಹಿರಂಗಪಡಿಸಲು ಸುಷ್ಮಾ ಈ ವೀಡಿಯೋ ಹಾಕಿದ್ದಾರೆ.

Loading...