ಭಾರತ ರಾಷ್ಟ್ರಧ್ವಜದ ಡೋರ್ ಮ್ಯಾಟ್ ಮಾರಾಟ: ಅಮೆಜಾನ್ ಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ – News Mirchi

ಭಾರತ ರಾಷ್ಟ್ರಧ್ವಜದ ಡೋರ್ ಮ್ಯಾಟ್ ಮಾರಾಟ: ಅಮೆಜಾನ್ ಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ

ಭಾರತದ ರಾಷ್ಟ್ರ ಧ್ವಜವನ್ನು ಚಿತ್ರಿಸಿದ ಡೋರ್ ಮ್ಯಾಟ್ ಗಳನ್ನು ತನ್ನ ಕೆನಡಾ ವೆಬ್ಸೈಟ್ ನಲ್ಲಿ ಮಾರಾಟಕ್ಕಿಟ್ಟ ಅಮೆಜಾನ್ ಕಂಪನಿಗೆ ವಿದೇಶಾಂಗ ಸಚಿವೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕೆನಡಾದ ವೆಬ್ಸೈಟಿನಲ್ಲಿ ಭಾರತ ಧ್ವಜವುಳ್ಳ ಡೋರ್ ಮ್ಯಾಟ್ ಗಳ ಮಾರಾಟಕ್ಕಿಟ್ಟ ಅಮೆಜಾನ್ ಕಂಪನಿಯು ಬೇಷರತ್ ಕ್ಷಮೆ ಯಾಚಿಸಿ, ಆ ವಸ್ತುಗಳನ್ನು ಆ ವಸ್ತುಗಳ ಮಾರಾಟವನ್ನು ಕೂಡಲೇ ಹಿಂತೆಗೆದುಕೊಳ್ಳದಿದ್ದಲ್ಲಿ ಅಮೆಜಾನ್ ಅಧಿಕಾರಿಗಳಿಗೆ ವೀಸಾಗಳನ್ನು ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಅಮೆಜಾನ್ ಕಂಪನಿಯ ಅಧಿಕಾರಿಗಳಿಗೆ ನೀಡಲಾಗಿರುವ ವೀಸಾಗಳನ್ನೂ ರದ್ದುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

Loading...

Leave a Reply

Your email address will not be published.