ಮಹಿಳಾ ಸೇನಾಧಿಕಾರಿಗೆ ಬ್ಲಾಕ್ ಮೇಲ್, ಪಾಕ್ ಬೇಹುಗಾರನ ಬಂಧನ – News Mirchi

ಮಹಿಳಾ ಸೇನಾಧಿಕಾರಿಗೆ ಬ್ಲಾಕ್ ಮೇಲ್, ಪಾಕ್ ಬೇಹುಗಾರನ ಬಂಧನ

ಮಹಿಳಾ ಕರ್ನಲ್ ಅವರಿಗೆ ಬೆದರಿಕೆ ಹಾಕಿದ್ದ ಶಂಕಿತ ಐಎಸ್ಐ ಏಜೆಂಟ್ ಒಬ್ಬನನ್ನು ದೆಹಲಿ ಸ್ಪೆಷಲ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಕರ್ನಲ್ ಗೆ ಸಂಬಂಧಿಸಿದ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುವುದಾಗಿ ಆತ ಬೆದರಿಸಿದ್ದನೆನ್ನಲಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಪಡೆಯಲು ಶಂಕಿತ ಐಎಸ್ಐ ಏಜೆಂಟ್ ಮಹಿಳಾ ಕರ್ನಲ್ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಮೂವರು ಶಂಕಿತರ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅರೆಸ್ಟ್ ಆದ ಶಂಕಿತ ಪಾಕ್ ಬೇಹುಗಾರನನ್ನು ಮಹಮದ್ ಪರ್ವೇಜ್ ಎಂದು ಗುರುತಿಸಲಾಗಿದೆ. ಮಹಿಳೆ ನೀಡಿದ್ದ ದೂರಿನಲ್ಲಿ ಎರಡು ಮೊಬೈಲ್ ಸಂಖ್ಯೆಗಳು, ಆರೋಪಿಗಳ ಫೇಸ್ಬುಕ್ ಐಡಿಗಳನ್ನು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದೆಹಲಿ ಪೊಲೀಸ್ ಉಗ್ರ ನಿಗ್ರಹ ವಿಭಾಗ ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದೆ.

Get Latest updates on WhatsApp. Send ‘Add Me’ to 8550851559

Loading...