ಇಬ್ಬರು ಐಸಿಸ್ ಉಗ್ರರ ಬಂಧನ, ದಾಳಿಯ ವೀಡಿಯೋ ತೆಗೆದು ಆತಂಕ ಸೃಷ್ಟಿಸುವ ಖತರ್ನಾಕ್ ಐಡಿಯಾ ಇವರದ್ದು – News Mirchi
We are updating the website...

ಇಬ್ಬರು ಐಸಿಸ್ ಉಗ್ರರ ಬಂಧನ, ದಾಳಿಯ ವೀಡಿಯೋ ತೆಗೆದು ಆತಂಕ ಸೃಷ್ಟಿಸುವ ಖತರ್ನಾಕ್ ಐಡಿಯಾ ಇವರದ್ದು

ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸುತ್ತಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಯಾವ ಸಂಘಟನೆಯ ಬೆಂಬಲವೂ ಇಲ್ಲದೆ ಏಕಾಂಗಿಯಾಗಿ ವಿಧ್ವಂಸಕ ಕೃತ್ಯ ನಡೆಸಲು ಇವರು ಸಿದ್ಧರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಗುಜರಾತ್ ನಿಂದ ಎರಡು ಬೇರೆ ಬೇರೆ ಪ್ರದೇಶಗಳಿಂದ ಇವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ ಕೋಟ್ ನ ವಸೀಂ ರಮೋಡಿಯಾ(ಎಂ.ಸಿ.ಎ ವಿದ್ಯಾರ್ಥಿ), ನಯೀಮ್(ಬಿಸಿಎ) ಐಸಿಸ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಈ ಇಬ್ಬರು ಶಂಕಿತ ಉಗ್ರರಿಂದ ಬಾಂಬ್ ತಯಾರಿಕಾ ಸಾಮಗ್ರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಧ್ಯಾತ್ಮಿಕ ಪ್ರದೇಶಗಳಾದ ಚೋತಿಲಾ(ದೇವಿ ಮಂದಿರ) ಸೇರಿದಂತೆ ಹಲವು ಕಡೆ ದಾಳಿಗಳನ್ನು ನಡೆಸಲು ಈ ಇಬ್ಬರು ಯೋಜನೆ ರೂಪಿಸಿದ್ದರು. ಖಚಿತ ಮಾಹಿತಿ ಪಡೆದು ಉಗ್ರರನ್ನು ವಶಕ್ಕೆ ಪಡೆದಿರುವುದಾಗಿ ಗುಜರಾತ್ ಭಯೋತ್ಪಾದಕ ನಿಯಂತ್ರಣ ಪಡೆಯ(ಎಟಿಎಸ್) ಐಜಿ ಜೆಕೆ ಭಟ್ ಹೇಳಿದ್ದಾರೆ. ರಾಜ್ ಕೋಟ್ ನಿಂದ ರಮೋಡಿಯಾನನ್ನು, ನಯೀಮ್ ನನ್ನು ಭಾವ್ ನಗರದಲ್ಲಿ ಅರೆಸ್ಟ್ ಮಾಡಿದ್ದಾರೆ.

ಭಯೋತ್ಪಾದಕ ದಾಳಿಯಿಂದ ದೇಶಾದ್ಯಂತ ಆತಂಕ ಸೃಷ್ಟಿಸಲು ದಾಳಿಯನ್ನು ವೀಡಿಯೋ ಮಾಡಿ, ಅದನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲು ಉದ್ದೇಶಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ಭಟ್ ಹೇಳಿದ್ದಾರೆ. ಬಾಂಬುಗಳು ಸ್ಪೋಟಿಸುವುದರೊಂದಿಗೆ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲು ಇವರ ಯೋಜನೆ ಒಂದು ಭಾಗವಾಗಿತ್ತು. ಎರಡು ವರ್ಷಗಳ ಹಿಂದೆ ಜಿಹಾದಿ ಆದರ್ಶಗಳತ್ತ ಆಕರ್ಷಿತರಾದ ಇವರಿಬ್ಬರೂ, ಆನ್ಲೈನ್ ಮೂಲಕ ಐಸಿಸ್ ನೊಂದಿಗೆ ಸಂಪರ್ಕದಲ್ಲಿದ್ದರು.

ಆಫ್ಘನಿಸ್ತಾನದಲ್ಲಿ ಕೇರಳ ಭಯೋತ್ಪಾದಕನ ಹತ್ಯೆ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಾಪತ್ತೆಯಾಗಿ ಐಸಿಸ್ ಸೇರಿದ್ದಾಗಿ ಭಾವಿಸಿದ್ದ 21 ಜನರಲ್ಲಿ ಒಬ್ಬನಾದ ಹಫೀಜ್(26) ಹತ್ಯೆಯಾಗಿರುವುದಾಗಿ ತಿಳಿದುಬಂದಿದೆ. ಆಫ್ಘಾನಿಸ್ತಾನದ ಗಡಿಯಲ್ಲಿ ಭಯೋತ್ಪಾದಕರ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಫೀಜ್ ಹತನಾಗಿದ್ದಾನೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!