ಗಡ್ಡವಿಲ್ಲದೆ ಪೊಲೀಸ್ ಉದ್ಯೋಗಕ್ಕೆ ಮರಳಲಾರೆ: ಶಂಶುದ್ದೀನ್ |News Mirchi

ಗಡ್ಡವಿಲ್ಲದೆ ಪೊಲೀಸ್ ಉದ್ಯೋಗಕ್ಕೆ ಮರಳಲಾರೆ: ಶಂಶುದ್ದೀನ್

ಗಡ್ಡ ತೆಗೆದು ಪೊಲೀಸ್ ಉದ್ಯೋಗಕ್ಕೆ ಮರಳಲು ಜಹ್ರುದ್ದೀನ್ ಶಂಶುದ್ದೀನ್ ನಿರಾಕರಿಸಿದ್ದಾರೆ. ಮಹಾರಾಷ್ಟ್ರ ರಿಸರ್ವ್ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಶುದ್ದೀನ್ ನಿಯಮಗಳ ಪ್ರಕಾರ ಶುಭ್ರವಾಗಿ ಶೇವ್ ಮಾಡಿಕೊಂಡು ಬರಲು ಅಧಿಕಾರಿಗಳು ಸೂಚಿಸಿದ್ದರು. [ಗೋಮಾಂಸ ತ್ಯಜಿಸೋಣ, ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಗೌರವಿಸೋಣ: ಅಜ್ಮೇರ್ ದರ್ಗಾ ಮುಖ್ಯಸ್ಥ]

ಆರಂಭದಲ್ಲಿ ತನ್ನ ಹಿರಿಯ ಅಧಿಕಾರಿಯಿಂದ ಗಡ್ಡವನ್ನು ನೀಟಾಗಿ ಟ್ರಿಮ್ ಮಾಡಿಕೊಳ್ಳಲು ಶಂಶುದ್ದೀನ್ ಗೆ ಅನುಮತಿ ಇತ್ತು. ಕೆಲ ತಿಂಗಳ ನಂತರ ಅನುಮತಿಯನ್ನು ಹಿಂಪಡೆದ ಕಮಾಂಡರ್, ಆತನನ್ನು ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಆದೇಶಿಸಿದ್ದರು. 2012 ರಲ್ಲಿ ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ಬಾಂಬೆ ಹೈಕೋರ್ಟ್, ಪೊಲೀಸ್ ಇಲಾಖೆ ಜ್ಯಾತ್ಯಾತೀತ ಇಲಾಖೆಯಾಗಿದ್ದು, ಅದರ ನೀತಿ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಶಂಶುದ್ದೀನ್ ಗೆ ಸೂಚಿಸಿತ್ತು. ಅಷ್ಟೇ ಅಲ್ಲದೆ ಗಡ್ಡ ಬಿಡುವುದು ಇಸ್ಲಾಂ ನ ಧಾರ್ಮಿಕ ನಿಯಮವೇನೂ ಅಲ್ಲ, ಹಾಗಾಗಿ ಅದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಎಂದು ಹೇಳಿತ್ತು.

Loading...
loading...
error: Content is protected !!