ಆರು ವರ್ಷಗಳ ನಂತರ ಜಾಮೀನಿನ ಮೇಲೆ ಸ್ವಾಮಿ ಅಸೀಮಾನಂದ ಹೊರಗೆ

ಮೂರು ಬಾಂಬ್ ಸ್ಪೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಸ್ವಾಮಿ ಅಸೀಮಾನಂದ ಅವರು ಆರು ವರ್ಷಗಳ ನಂತರ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮೇ 18, 2007 ರಂದು 9 ಜನರನ್ನು ಬಲಿ ಪಡೆದಿದ್ದ ಮೆಕ್ಕಾ ಮಸೀದಿ ಸ್ಪೋಟಕ್ಕೆ ಸಂಬಂಧಿಸಿದಂತೆ ನವೆಂಬರ್ 19, 2010 ರಲ್ಲಿ ಹರಿದ್ವಾರದಲ್ಲಿ ಪೊಲೀಸರು ಅಸೀಮಾನಂದ ಅವರನ್ನು ಬಂಧಿಸಿದ್ದರು. ನಿನ್ನೆ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿದೆ. ಇದೇ ಮಾರ್ಚ್ 8 ರಂದು 2007 ರ ಅಜ್ಮೇರ್ ದರ್ಗಾ ಸ್ಪೋಟದ ಪ್ರಕರಣದಲ್ಲಿ ಅಸೀಮಾನಂದ ಅವರನ್ನು ಜೈಪುರ ಕೋರ್ಟ್ ದೋಷಮುಕ್ತಗೊಳಿಸಿತ್ತು. ನಂತರ ಅವರನ್ನು ಜೈಪುರದಿಂದ ಹೈದರಾಬಾದಿನ ಜೈಲಿಗೆ ಕರೆತಂದಿದ್ದರು.

ಈಗಾಗಲೇ ಸಂಜೌತಾ ಎಕ್ಸ್‌ಪ್ರೆಸ್ ಸ್ಪೋಟ ಪ್ರಕರಣದಲ್ಲಿ ಅಂಬಾಲಾ ಕೋರ್ಟ್ ಜಾಮೀನು ನೀಡಿದ್ದು, ಅಜ್ಮೇರ್ ಸ್ಪೋಟ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ ಎಂದು ಜಾಮೀನಿನ ವಿಚಾರಣೆ ವೇಳೆ ಅಸೀಮಾನಂದ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.

Loading...

Leave a Reply

Your email address will not be published.

error: Content is protected !!