ನಕಲಿ ನೋಟು ಹಾವಳಿಗೆ ಚಿದಂಬರಂ ಕಾರಣ : ಸ್ವಾಮಿ

ನಕಲಿ ನೋಟಿನ ಹಾವಳಿಗೆ ಹಿಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರೇ ಕಾರಣ ಎಂದು ಬಿಜೆಪಿಯ ಸುಬ್ರಮಣ್ಯ ಸ್ವಾಮಿ ಆರೋಪಿಸಿದ್ದಾರೆ. ಪಾಕಿಸ್ತಾನಕ್ಕೆ ನೋಟು ಮುದ್ರಿಸಿಕೊಡುತ್ತಿದ್ದ ಬ್ರಿಟೀಷ್ ಕಂಪನಿಗೆ ಭಾರತದ ಕರೆನ್ಸಿ ಪ್ರಿಂಟ್ ಮಾಡಲು ಚಿದಂಬರಂ ಗುತ್ತಿಗೆ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ದೇಶದ ಭದ್ರತೆಗಾಗಿ ರೂ.500, ರೂ.1000 ಮುಖಬೆಲೆಯ ನೋಟುಗಳನ್ನು ನರೇಂದ್ರ‌ಮೋದಿಯವರ ರದ್ದುಗೊಳಿಸಿದ್ದು ಈ ಸಂದರ್ಭದಲ್ಲಿ ಅತ್ಯಗತ್ಯವಾಗಿತ್ತು ಅಭಿಪ್ರಾಯ ವ್ಯಕ್ತಪಡಿಸಿದರು.

ಭಯೋತ್ಪಾದನೆಗೆ ಹಣ ಸರಬರಾಜು ಆಗುತ್ತಿದ್ದದ್ದೇ ಈ ನಕಲಿ ನೋಟುಗಳಿಂದ. ದೊಡ್ಡ ನೋಟುಗಳ ರದ್ದು ನಿರ್ಧಾರದ ಮೂಲಕ ದೊಡ್ಡ ಹೊಡೆತ ನೀಡಿದಂತಾಗಿದೆ ಎಂದು ಮೋದಿಯವರ ಕ್ರಮವನ್ನು ಸಮರ್ಥಿಸಿಕೊಂಡರು.

ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ನಕಲಿ ಕರೆನ್ಸಿ ಹಾವಳಿ ಆರಂಭವಾಯಿತು. ಅವರ ಅಧಿಕಾರಾವಧಿಯಲ್ಲಿ ಬ್ರಿಟೀಷ್ ಕಂಪನಿಗೆ ನೋಟು ಮುದ್ರಣ ಗುತ್ತಿಗೆ ನೀಡಿದ್ದರು. ಆದರೆ ಅದೇ ಕಂಪನಿ ಪಾಕಿಸ್ತಾನಕ್ಕೂ ನೋಟು ಮುದ್ರಿಸಿ ಕೊಡುತ್ತಿತ್ತು. ಹೀಗಾಗಿ ನೋಟು ಮುದ್ರಣ ಕಾಗದವನ್ನು ಪಡೆಯಲು ಪಾಕಿಸ್ತಾನಕ್ಕೆ ತುಂಬಾ ಸುಲಭವಾಯಿತು. ಕಾಶ್ಮೀರದಲ್ಲಿ ನಡೆಯುವ ಪ್ರತಿಭಟನೆಗಳಿಗೆ ಪಾಕಿಸ್ತಾನದಿಂದ ಬರುತ್ತಿದ್ದ ಭಾರತದ ನಕಲಿ ನೋಟುಗಳೇ ಆಧಾರವಾಗಿದ್ದವು ಎಂದು ಹೇಳಿದ್ದಾರೆ.