4 ಸಾವಿರಕ್ಕೆ ಅದ್ಭುತ ಸ್ಮಾರ್ಟ್ ಫೋನ್

ಸ್ವೈಪ್ ಟೆಕ್ನಾಲಜೀಸ್ ಕಡಿಮೆ ದರದಲ್ಲಿ ಅದ್ಭುತ ಸ್ಮಾರ್ಟ್ ಫೋನ್ ಅನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೂ.3,999 ಕ್ಕೆ ಸ್ವೈಪ್ “ಎಲೈಟ್ 4ಜಿ” ಸ್ಮಾರ್ಟ್ ಫೋನ್ ಅನ್ನು ಕಂಪನಿ ಬಿಡುಗಡೆ ಮಾಡಿದ್ದು, ಈ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.

ಮೂರು ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರುವುದಾಗಿ ಸಿಇಒ ಶ್ರೀಪಾಲ್ ಗಾಂಧಿ ಹೇಳಿದ್ದಾರೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್ ಫೋನ್ ಅನ್ನು ಅಭಿವೃದ್ಧಿಗೊಳಿಸಿರುವುದಾಗಿ ಅವರು ಹೇಳಿದ್ದಾರೆ. ಕಳೆದ ವಾರವೇ ಸ್ವೈಪ್ ಎಲೈಟ್ ವಿಆರ್ ಎಂಬ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಸದ್ಯ 4ಜಿ ಗ್ರಾಹಕರನ್ನು ಗುರಿಯಾಗಿಸಿ ಎಲೈಟ್ 4ಜಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಲೈಟ್ 4ಜಿ ವಿಶೇಷತೆಗಳು
ಆಂಡ್ರಾಯ್ಡ್ 6.0 ಮಾರ್ಷ್ಮಾಲೋ
1.3 ಗಿಗಾ ಹರ್ಟ್ಜ್ ಕ್ವಾಡ್ ಕೋರ್ ಪ್ರೊಸೆಸರ್
5 ಇಂಚಿನ ಹೆಚ್.ಡಿ ಎಫ್ ಡಬ್ಲ್ಯೂವಿಜಿಎ ಡಿಸ್ ಪ್ಲೇ
8 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
1 ಜಿಬಿ ರ್ಯಾಮ್
8 ಜಿಬಿ ಇಂಟರ್ನಲ್ ಸ್ಟೋರೇಜ್, 64 ಜಿಬಿವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ
ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
2500 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ
4ಜಿ ವಾಯ್ಸ್ ಓವರ್ ಎಲ್ಟಿಇ
ಡ್ಯುಲ್ ಸಿಮ್ (ಮೈಕ್ರೋ+ನ್ಯಾನೋ0
3.5 ಎಂ.ಎಂ. ಆಡಿಯೋ ಜಾಕ್