ಮೋದಿ ಎಫೆಕ್ಟ್: ಹಿಜ್ಬುಲ್ ಉಗ್ರ ಮುಖಂಡನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ಅಮೆರಿಕಾ – News Mirchi

ಮೋದಿ ಎಫೆಕ್ಟ್: ಹಿಜ್ಬುಲ್ ಉಗ್ರ ಮುಖಂಡನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ಅಮೆರಿಕಾ

ಕಾಶ್ಮೀರ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕನೆಂದು ಅಮೆರಿಕಾ ಘೋಷಿಸಿರುವುದು ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಭೇಟಿಗೆ ಕೆಲವೇ ಗಂಟೆಗಳ ಮುನ್ನಾ ಅಮೆರಿಕಾ ವಿದೇಶಾಂಗ ಸಚಿವಾಲಯ ಈ ಪ್ರಕಟಣೆ ಮಾಡಿದೆ. ಸೋಮವಾರ ಈ ಘೋಷಣೆ ಹೊರಬಿದ್ದಿದ್ದು, ಇನ್ನು ಮುಂದೆ ಅಮೆರಿಕನ್ನರು ಯಾರೂ ಸಲಾಹುದ್ದೀನ್ ಜೊತೆ ಯಾವುದೇ ವ್ಯವಹಾರಗಳು ನಡೆಸುವಂತಿಲ್ಲ, ಆತನೊಂದಿಗೆ ಯಾವುದೇ ರೀತಿಯ ಸಂಬಂಧಗಳನ್ನು ಹೊಂದುವುದು ನಿಷೇಧವಾಗುತ್ತದೆ. ಅಮೆರಿಕಾ ವ್ಯಾಪ್ತಿಯಲ್ಲಿ ಬರುವ ಸಲಾಹುದ್ದೀನ್ ಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಕಾಶ್ಮೀರ ವಿವಾದದಲ್ಲಿ ಶಾಂತಿಯುತ ಪರಿಹಾರಕ್ಕಾಗಿ ತಾನು ವಿರೋಧಿ ಎಂದು ಈತ ಈ ಹಿಂದೆ ಹೇಳಿದ್ದ. ಅದರ ಜೊತೆಗೆ ಮತ್ತಷ್ಟು ಜನರ ಕಾಶ್ಮೀರ ಯುವಕರನ್ನು ಆತ್ಮಹತ್ಯಾ ಬಾಂಬರ್ ಗಳನ್ನಾಗಿ ಮಾಡಿ, ಕಾಶ್ಮೀರ ಕಣಿವೆಯನ್ನು ಭಾರತೀಯ ಸೈನಿಕರಿಗೆ ಸ್ಮಶಾನವನ್ನಾಗಿ ಬದಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದ.

ಸಲಾಹುದ್ದೀನ್ ನೇತೃತ್ವದ ಹಿಜ್ಬುಲ್ ಮುಜಾಹಿದೀನ್ ಉಗ್ರರು ಪಾಕ್ ನಲ್ಲಿದ್ದುಕೊಂಡು ಜಮ್ಮೂ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಮುಂದಾಗಿ, ನೂರಾರು ಜನರ ಸಾವಿಗೆ ಕಾರಣರಾಗಿದ್ದಾರೆ. ಇದೀಗ ಆ ಸಂಘಟನೆಯ ಮುಖ್ಯಸ್ಥನನ್ನು ಜಾಗತಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದ್ದು, ಅಮೆರಿಕದ ನಡೆಯನ್ನು ಭಾರತ ಸ್ವಾಗತಿಸಿದೆ.

Contact for any Electrical Works across Bengaluru

Loading...
error: Content is protected !!