ತಹಶೀಲ್ದಾರ್ ಸಹಿಯನ್ನೇ ನಕಲು ಮಾಡಿ ಇತರರ ವೇತನ ತನ್ನ ಖಾತೆಗೆ ಹಾಕಿಕೊಂಡ ಚಾಲಾಕಿ ಗುಮಾಸ್ತ

ಬೆಳಗಾವಿ: ಸರ್ವೇಯರ್ ನೌಕರರ ವೇತನವನ್ನು ತಹಶೀಲ್ದಾರ್ ರವರ ಸಹಿ ನಕಲು ಮಾಡಿ ತನ್ನ ಖಾತೆಗೆ ಪಾವತಿ ಮಾಡಿಸಿಕೊಂಡು ಗುಳುಂ ಮಾಡಿದ ಗುಮಾಸ್ತನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ನೌಕರರ ವೇತನವನ್ನು ತಹಶೀಲ್ದಾರ್ ಸಹಿ ನಕಲು ಮಾಡಿ ಈತ ತನ್ನ ಖಾತೆಗೆ ವರ್ಗಾಯಿಸುತ್ತಿದ್ದ. ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿ ಅಥಣಿಯ ಸರ್ವೇಯರ್ ಕಛೇರಿಯ ಗುಮಾಸ್ತ ಅರುಣ್ ತಲೆಮರೆಸಿಕೊಂಡಿದ್ದ. ಇದೀಗ ಅಥಣಿ ಪೊಲೀಸರು ಈತನನ್ನು ಬಂಧಿಸಿ ಜೆಎಂಎಫ್‌ಸಿ ನ್ಯಾಯಾಲಯದ ಎದುರು ಹಾಜರುಪಡಿಸಿ 7 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.

Loading...

Leave a Reply

Your email address will not be published.

error: Content is protected !!