ಐಫೋನ್ 8 ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಸಮಸ್ಯೆ? – News Mirchi

ಐಫೋನ್ 8 ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಸಮಸ್ಯೆ?

ಐಫೋನ್ 8, ಐಫೋನ್ 8 ಪ್ಲಸ್ ಜಾಗತಿಕ ಮಾರುಕಟ್ಟೆಯಲ್ಲಿ(ಭಾರತದಲ್ಲಿ ಸೆಪ್ಟೆಂಬರ್ 29) ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಈ ಸ್ಮಾರ್ಟ್ ಫೋನ್ ಗೆ ಸಂಬಂಧಿಸಿದಂತೆ ಹಲವು ದೂರುಗಳು ಕೇಳಿ ಬರುತ್ತಿವೆ. ಈ ಹಿಂದೆ “ಸ್ಯಾಮ್ಸಂಗ್ ಗ್ಯಾಲಾಕ್ಸಿ-7” ಸ್ಮಾರ್ಟ್ ಫೋನ್ ಗಾದಂತೆ ಬ್ಯಾಟರಿ ಸಂಬಂಧಿತ ಸಮಸ್ಯೆಗಳು ವರದಿಯಾಗುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ ತೈವಾನ್ ನಲ್ಲಿ ಒಂದು, ಮತ್ತೊಂದು ದೂರು ಜಪಾನ್ ನಲ್ಲಿ ವರದಿಯಾಗಿದೆ.

ತೈವಾನ್ ಮಾಧ್ಯಮಗಳ ವರದಿಯಂತೆ, ಐಫೋನ್ 8 ಬ್ಯಾಟರಿ ಉಬ್ಬಿದ್ದು, ಫೋನ್ ಮುಂಭಾಗ ಕಳಚಿ ಹೊರಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಈಗ ಟ್ವಿಟರ್ ನಲ್ಲಿ ಹರಿದಾಡುತ್ತಿವೆ. ತೈವಾನ್ ನ ಮಹಿಳೆಯೊಬ್ಬರು 64 ಜಿಬಿ ಸ್ಟೋರೇಜ್ ರೋಸ್ ಗೋಲ್ಡ್ “ಐಫೋನ್ 8 ಪ್ಲಸ್” ಖರೀದಿಸಿದ್ದರು. ಐದು ದಿನಗಳ ನಂತರ ಒರಿಜಿನಲ್ ಕೇಬಲ್, ಅಡಾಪ್ಟರ್ ನಿಂದ ಚಾರ್ಜ್ ಗೆ ಹಾಕಿದಾಗ ಮೂರು ನಿಮಿಷಗಳಿಗೇ ಫೋನ್ ಮುಂಭಾಗ ಅಂದರೆ ಸ್ಕ್ರೀನ್ ಭಾಗ ಕಳಚಿ ಹೊರಗೆ ಬಂದಿದೆ.

ಚೀನಾದಲ್ಲಿ ವರದಿಯಾದ ಮತ್ತೊಂದು ಘಟನೆಯಲ್ಲಿ ಗ್ರಾಹಕನಿಗೆ ಇದೇ ರೀತಿಯ ಅನುಭವವಾಗಿದೆ. ಫೋನ್ ತನ್ನ ಕೈಸೇರುವ ವೇಳೆಗೆ ಮೊಬೈಲ್ ಸ್ಕ್ರೀನ್ ಸಂಪೂರ್ಣ ಕಳಚಿಕೊಂಡಿತ್ತು ಎಂದು ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪರಿಶೀಲಿಸಲು ಆಪಲ್ ಸಂಸ್ಥೆಗೆ ಕೆಲವು ಹ್ಯಾಂಡ್ ಸೆಟ್ ಗಳನ್ನು ವಾಪಸ್ ಕಳುಹಿಸುತ್ತಿದ್ದಾರಂತೆ.

ಅಷ್ಟೇ ಅಲ್ಲದೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್-7 ಸ್ಮಾರ್ಟ್ ಫೋನ್ ಗಳಿಗೆ ಬ್ಯಾಟರಿ ತಯಾರಿಸಿದ ಕಂಪನಿ ಆಂಪ್ರೆಕ್ಸ್ ಟೆಕ್ನಾಲಜೀಸ್ ಲಿಮಿಟೆಡ್, ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಗಳಿಗೂ ಬ್ಯಾಟರಿಗಳನ್ನು ತಯಾರಿಸಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದು ಕಡೆ ನಮ್ಮ ದೇಶದ್ಲಲೂ ಐಫೋನ್ 8 ರಲ್ಲಿ ಆಡಿಯೋಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಎದುರಾಗಿರುವ ಮಾತುಗಳು ಕೇಳಿಬರುತ್ತಿವೆ.

Get Latest updates on WhatsApp. Send ‘Add Me’ to 8550851559

Loading...