ಎರಡನೇ ಪತ್ನಿಯೊಂದಿಗೆ ಒಂದು ದಿನ ಸಂಸಾರ ಮಾಡಿ ಪೋಸ್ಟ್ ಮೂಲಕ ತಲಾಖ್ – News Mirchi
We are updating the website...

ಎರಡನೇ ಪತ್ನಿಯೊಂದಿಗೆ ಒಂದು ದಿನ ಸಂಸಾರ ಮಾಡಿ ಪೋಸ್ಟ್ ಮೂಲಕ ತಲಾಖ್

ಹೈದರಾಬಾದ್: ಎರಡನೇ ವಿವಾಹವಾಗಿ ಪತ್ನಿಯೊಂದಿಗೆ ಕೇವಲ ಒಂದು ದಿನ ಸಂಸಾರ ಮಾಡಿ ಪೋಸ್ಟ್ ಮೂಲಕ ತಲಾಖ್ ನೀಡಿರುವ ಘಟನೆ ತೆಲಂಗಾಣದ ಹೈದರಾಬಾದಿನಲ್ಲಿ ನಡೆದಿದೆ. ಕೂಕಟ್ ಪಲ್ಲಿ ನಿವಾಸಿ ಮಹಮದ್ ಹನೀಫ್ (38), ಬಹದೂರುನ್ನೀಸಾ(32) ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಹದೂರುನ್ನೀಸಾಗೆ ಹಲವು ಬಾರಿ ಗರ್ಭಪಾತ ಉಂಟಾಗಿದ್ದರಿಂದ ಇನ್ನು ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಗಂಡು ಮಗುವಿನ ಮೋಹದಿಂದ ಹನೀಫ್, ತನ್ನ ಮೊದಲ ಪತ್ನಿ ಬಹದೂರುನ್ನೀಸಾಳನ್ನು ಒಪ್ಪಿಸಿ ಫರ್ಹೀನ್ ಬೇಗಂ ಎಂಬಾಕೆಯನ್ನು ಮತ್ತೊಂದು ಮದುವೆಯಾಗಲು ಸಿದ್ಧನಾದ.

ಮಾರ್ಚ್ 9 ರಂದು ಫರ್ಹೀನ್ ಳನ್ನು ಎರಡನೇ ಮದುವೆಯಾಗಿ ಆಕೆಯನ್ನು ಕೂಕಟ್ ಪಲ್ಲಿಯಲ್ಲಿರುವ ತನ್ನ ಮನೆಯ ಸಮೀಪ ಬಾಡಿಗೆ ಮನೆಯೊಂದರಲ್ಲಿ ಇಟ್ಟ. ಮದುವೆಯ ದಿನ ಬಾಡಿಗೆ ಮನೆಯಲ್ಲಿ ಫರ್ಹೀನ್‌ಳೊಂದಿಗೆ ಕಳೆದ ಹನೀಫ್, ಮರುದಿನ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿದ್ದ. ತನಗೆ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಯಲ್ಲಿದ್ದೇನೆ, ಸ್ವಲ್ಪ ದಿನಗಳ ಕಾಲ ನಿಮ್ಮ ಮನೆಯಲ್ಲಿರು ಎಂದು ಆಕೆಗೆ ಫೋನ್ ಮಾಡಿ ಹೇಳಿದ್ದ.

ಆದರೆ ಮಾರ್ಚ್ 18 ರಂದು ತನಗೆ ಈ ಮದುವೆ ಇಷ್ಟವಿಲ್ಲ, ತನ್ನ ಆರೋಗ್ಯವೂ ಸರಿಯಿಲ್ಲ, ಹೀಗಾಗಿ ತಾನು ವಿಚ್ಛೇಧನ ನೀಡುತ್ತಿದ್ದೇನೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾನೆ. ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ ಆಕೆ ಶುಕ್ರವಾರ ಹನೀಫ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಹನೀಫ್ ನನ್ನು ಬಂಧಿಸಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!