Big Breaking News

ವಿಶ್ವದ ಅತಿ ಎತ್ತರದ ದೇವಾಲಯ ಇನ್ನು ನಮ್ಮ ದೇಶದಲ್ಲೇ!

ವಿಶ್ವದಲ್ಲಿ ಇದುವರೆಗೂ ಅತಿ ಎತ್ತರದ ಆಲಯ ಎಂದರೆ ಅದು ವ್ಯಾಟಿಕನ್ ಸಿಟಿಯಲ್ಲಿನ ಸೈಂಟ್ ಪಿಟರ್ಸ್ ಬೆಸಿಲಿಕಾ ಎಂದು ಹೇಳುತ್ತಿದ್ದರು. ಆದರೆ ಇನ್ನು ಮುಂದೆ ಅದಕ್ಕಿಂತಲೂ ಎತ್ತರದ ದೇವಾಲಯ ನಮ್ಮ ದೇಶದಲ್ಲಿಯೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅಂತಹ‌ ದೇವಾಲಯದ ನಿರ್ಮಾಣವಾಗುತ್ತಿದೆ.

Download Free

Chandroday mandirಉತ್ತರ ಪ್ರದೇಶದ ಮಥುರಾದಲ್ಲಿನ ಬೃಂದಾವನದಲ್ಲಿ ಎಂಬ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.

ಇಸ್ಕಾನ್ ನಿರ್ಮಿಸುತ್ತಿರುವ ಈ ಆಲಯದಲ್ಲಿ ಒಂದು ಥೀಮ್ ಪಾರ್ಕ್ ಕೂಡಾ ಇರುತ್ತದೆ. ಯಾವುದೇ ಭೂಕಂಪಕ್ಕೂ ಹಾನಿಗೊಳಗಾಗದಂತೆ ಇದನ್ನು ನಿರ್ಮಿಸುತ್ತಿರುವುದು ವಿಶೇಷ. ಒಟ್ಟು 700 ಅಡಿ ಎತ್ತರದ ಈ ಕಟ್ಟಡದಲ್ಲಿ 70 ಅಂತಸ್ತುಗಳಿರುತ್ತವೆ.

Chandroday mandirಮಕ್ಕಳು ಆಟವಾಡಲು ಪಾರ್ಕ್ ರೈಡ್, ಅನಿಮೆಟ್ರಾನಿಕ್ಸ್, ಲೈಟ್ ಅಂಡ್ ಸೌಂಡ್ ಶೋ, ಲೇಸರ್ ಶೋಗಳಿರುತ್ತವೆ. ಒಟ್ಟು 70 ಅಂತಸ್ತುಗಳು ಹತ್ತಲು ಅನುಕೂಲವಾಗುವಂತೆ ಒಂದು ಕ್ಯಾಪ್ಸೂಲ್ ಲಿಫ್ಟ್ ಇರುತ್ತದೆ. ಅಷ್ಟು ಎತ್ತರದಿಂದ ನಗರವನ್ನು ನೋಡುವುದೂ ಜನರಿಗೆ ವಿಶಿಷ್ಟ ಅನುಭವ ನೀಡುತ್ತದೆ.

ಇಲ್ಲಿನ ವಾತಾವರಣ ಬೃಂದಾವನದಂತೆಯೇ ಇರಲಿದೆ. ಈ ದೇವಾಲಯದ ಸುತ್ತಲೂ ಸುಮಾರು 30 ಎಕರೆಗಳ ಕೃತಕ ಅರಣ್ಯ ಇದೆ. ಸದ್ಯ 180 ಅಡಿ ಆಳದಲ್ಲಿ ದೇವಾಲಯಕ್ಕೆ ಬುನಾದಿ ಹಾಕುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳ್ಳಲು ನಾವು ತುಂಬಾ ದಿನಗಳೇ ಕಾಯಬೇಕು.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache