ತಮಿಳುನಾಡು ವಿಧಾನಸಭೆಯಲ್ಲಿ ಗೊಂದಲದ ವಾತಾವರಣ – News Mirchi

ತಮಿಳುನಾಡು ವಿಧಾನಸಭೆಯಲ್ಲಿ ಗೊಂದಲದ ವಾತಾವರಣ

ಚೆನ್ನೈ: ಹಲವು ತಿರುವುಗಳು, ನಾಟಕೀಯ ಘಟನೆಗಳನ ನಡುವೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ನಿರ್ಣಯವನ್ನು ಮಂಡಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಮ್ ಗೆ ಮಾತನಾಡಲು ಅವಕಾಶ ನೀಡಬೇಕೆಂದು ಡಿಎಂಕೆ ಸದಸ್ಯರು ಘೋಷಣೆ ಕೂಗಿದರು. ಡಿಎಂಕೆ ಗೆ ವಿರುದ್ಧವಾಗಿ ಅಣ್ಣಾಡಿಎಂಕೆ(ಪಳನಿಸ್ವಾಮಿ ಗುಂಪು) ಶಾಸಕರೂ ಘೋಷಣೆ ಕೂಗಿದರು. ಹೀಗಾಗಿ ಅಧಿವೇಶನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಗೊಂದಲದ ಹಿನ್ನೆಲೆಯಲ್ಲಿ ಓಟಿಂಗ್ ನಡೆಸಲು ತಡವಾಗುವ ಸೂಚನೆಗಳು ಕಾಣಿಸುತ್ತಿವೆ. ವಿಧಾನಸಭೆಯಲ್ಲಿ ಪನ್ನೀರ್ ಸೆಲ್ಂ ಗುಂಪು ಚೀಫ್ ವಿಪ್ ಆಗಿ ಸೆಮ್ಮಲೈನ್ ರನ್ನು ಮಧುಸೂಧನ್ ನೇಮಕ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಮಾತನಾಡಿ, ಬಹುಮತ ಸಾಬೀತಪಡಿಸಲು ರಾಜ್ಯಪಾಲರು 15 ದಿನಗಳು ಸಮಯ ನೀಡಿದ್ದಾರೆ, ಆತುರವೇಕೆ? ಬಹುಮತ ಸಾಬೀತು ಪಡಿಸಲು ಮತ್ತೊಂದು ದಿನವನ್ನು ನಿಗದಿಗೊಳಿಸಲು. ರಹಸ್ಯ ಮತದಾನದ ಮೂಲಕವೇ ಪ್ರಜಾಪ್ರಭುತ್ವ ಉಳಿಯುತ್ತದೆ. ಶಾಸಕರನ್ನು ರೆಸಾರ್ಟ್ ನಲ್ಲಿ ಇಡಬೇಕಾಗಿ ಬರಲು ಕಾರಣವೇನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರಹಸ್ಯ ಮತದಾನಕ್ಕೆ ಒತ್ತಾಯಿಸಿ ಪ್ರತಿಪಕ್ಷ ಡಿಎಂಕೆ ಸದಸ್ಯರು ಕುರ್ಚಿಗಳನ್ನು ಮುರಿದು ಸ್ಪೀಕರ್ ಮೇಜು ಏರಿದ ಘಟನೆ ನಡೆಯಿತು. ಕಾಂಗ್ರೆಸ್, ಯೂನಿಯನ್ ಮುಸ್ಲಿಂ ಲೀಗ್ ಸಹಾ ರಹಸ್ಯ ಮತದಾನಕ್ಕೆ ಒತ್ತಾಯಿಸಿದರು. ಕಲಾಪದಲ್ಲಿ ಉಂಟಾದ ಗದ್ದಲದಿಂದಾಗಿ ಸ್ಪೀಕರ್ ಕಲಾಪವನ್ನು 1 ಗಂಟೆಗೆ ಮುಂದೂಡಿದ್ದಾರೆ ಎನ್ನಲಾಗಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!