19 ಶಾಸಕರನ್ನು ಅನರ್ಹಗೊಳಿಸುವಂತೆ ತಮಿಳುನಾಡು ಸ್ಪೀಕರ್ ಗೆ ಮನವಿ – News Mirchi

19 ಶಾಸಕರನ್ನು ಅನರ್ಹಗೊಳಿಸುವಂತೆ ತಮಿಳುನಾಡು ಸ್ಪೀಕರ್ ಗೆ ಮನವಿ

ತಮಿಳುನಾಡು ರಾಜಕೀಯ ಗಂಟೆಗೊಂದು ತಿರುವು ಪಡೆಯುತ್ತಿದೆ. ಪಳನಿಸ್ವಾಮಿ ಸರ್ಕಾರವನ್ನು ಉರುಳಿಸಲು ಶಶಿಕಲಾ, ದಿನಕರನ್ ಗುಂಪು ಪ್ರಯತ್ನಿಸುತ್ತಿದ್ದರೆ, ಸರ್ಕಾರವನ್ನು ಉಳಿಸಿಕೊಳ್ಳಲು ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಗುಂಪು ಪರದಾಡುತ್ತಿದೆ. ದಿನಕರನ್ ಬೆನ್ನಿಗಿರುವ 19 ಜನ ಬಂಡಾಯ ಶಾಸಕರನ್ನು ಅನರ್ಹರೆಂದು ಘೋಷಿಸುವಂತೆ ಸರ್ಕಾರದ ಚೀಫ್ ವಿಪ್ ರಾಜೇಂದ್ರನ್ ಗುರುವಾರ ವಿಧಾನಸಭೆ ಸ್ಪೀಕರ್ ಪಿ ಧನಪಾಲ್ ಗೆ ಮನವಿ ಮಾಡಿದ್ದಾರೆ. ಈ ಕುರಿತು ದಿನಕರನ್ ಗುಂಪು ಪ್ರತಿಕ್ರಿಯಿಸಿದ್ದು, ಚೀಫ್ ವಿಪ್ ಪ್ರಸ್ತಾವನೆ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದೆ. ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ಬದಲಿಸಲು ಮಾತ್ರ ನಮ್ಮ ಒತ್ತಾಯ ಎಂದು ದಿನಕರನ್ ಗುಂಪು ಹೇಳುತ್ತಿದೆ.

ದಿನಕರನ್ ಗೆ ಸಿಎಂ ಹುದ್ದೆ ಮೇಲೆ ಆಸೆಯಿಲ್ಲ. ವೈಯುಕ್ತಿಕ ಲಾಭಕ್ಕಾಗಿ ಅವರು ಪಕ್ಷವನ್ನು ನಡೆಸುತ್ತಿಲ್ಲ ಎಂದು ದಿನಕರನ್ ಗುಂಪಿನ ಶಾಸಕ ತಂಗ ತಮಿಳ ಸೆಲ್ವಂ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಕೂಡಾ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಯಾರನ್ನು ಬೇಕಾದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡಿದರೂ ನಮ್ಮ ಆಕ್ಷೇಪವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲ ಭ್ರಷ್ಟ ಸಚಿವರನ್ನೂ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಶ್ವಾಸ ಮತ ಯಾಚನೆಯಲ್ಲಿ ಪಳನಿಸ್ವಾಮಿಗೆ ವಿರುದ್ಧವಾಗಿ ಮತ ಹಾಕುತ್ತೇವೆ ಎಂದು ತಂಗ ತಮಿಳ ಸೆಲ್ವಂ ಸ್ಪಷ್ಟಪಡಿಸಿದ್ದಾರೆ. ಇನ್ನು ಪುದಚ್ಚೇರಿ ರೆಸಾರ್ಟ್ ನಲ್ಲಿರುವ ದಿನಕರನ್ ಗುಂಪಿನ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Contact for any Electrical Works across Bengaluru

Loading...
error: Content is protected !!