ಜಲ್ಲಿಕಟ್ಟುಗೆ ಇಬ್ಬರ ಬಲಿ, 50 ಕ್ಕೂ ಹೆಚ್ಚು ಜನರಿಗೆ ಗಾಯ

ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೊನೆಗೂ ಜಲ್ಲಿಕಟ್ಟು ಆಚರಣೆಗೆ ವಿಧಿಸಿದ್ದ ನಿಷೇಧವನ್ನು ಸುಗ್ರೀವಾಜ್ಞೆ ಮೂಲಕ ತೆರವುಗೊಳಿಸಿಕೊಳ್ಳುವಲ್ಲಿ ತಮಿಳಿಗರು ಯಶಸ್ವಿಯಾದರು.‌ ಆದರೆ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪುದುಕೊಟ್ಟೈನಲ್ಲಿ ಆಯೋಜಿಸಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿ ಪಳಗಿಸುವ ವೇಳೆ ಗೂಳಿಯ ತಿವಿತಕ್ಕೆ ಇಬ್ಬರು ಸಾವನ್ನಪ್ಪಿರುವ ವಿಷಾದಕರ ಘಟನೆ ನಡೆದಿದೆ. ಅಷ್ಟೇ ಅಲ್ಲದೆ 50 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಲ್ಲಿಕಟ್ಟು ಆಚರಣೆಯಲ್ಲಿ ಇಂತಹ ಘಟನೆಗಳು ಸಾಮಾನ್ಯವೇ ಆಗಿದ್ದರೂ, ತಮಿಳುನಾಡಿನ ಜನರು ಮಾತ್ರ ಈ ಸಾಂಪ್ರದಾಯಿಕ ಕ್ರೀಡೆ ಬಿಡಲು ಸಿದ್ಧರಿಲ್ಲ. ಜಲ್ಲಿಕಟ್ಟು ಆಚರಣೆಗೆ ಅನುಕೂಲವಾಗುವಂತೆ ಒಂದು ಕಾನೂನು ತರುವುದಾಗಿ ಅಲ್ಲಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.