ಮಹಿಳಾ ಪೇದೆ ಮೇಲೆ ಆಸಿಡ್ ದಾಳಿ

ಸಾಮಾನ್ಯ ಮಹಿಳೆಯರಿಗೇ ಅಲ್ಲ, ಮಹಿಳಾ ಪೊಲೀಸ್ ಪೇದೆಗಳಿಗೂ ನಮ್ಮ ದೇಶದಲ್ಲಿ ಭದ್ರತೆ ಇಲ್ಲವಾಗಿದೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ತುರಪ್ಪತೂರಿನಲ್ಲಿ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಅಪರಿಚಿತ ವ್ಯಕ್ತಿಗಳು ಆಸಿಡ್ ಸುರಿದ ಘಟನೆ ನಡೆದಿದೆ.

ಲಾವಣ್ಯ ಎಂಬ ಮಹಿಳಾ ಪೊಲೀಸ್ ಪೇದೆ ರಾತ್ರಿ ಡ್ಯೂಟಿ ಮುಗಿಸು ಮನೆಗೆ ವಾಪಸಾಗುವ ವೇಳೆ ಕೆಲ ಅಪರಿಚಿತ ದುಷ್ಕರ್ಮಿಗಳು ಅಸಿಡ್ ದಾಳಿ ನಡೆಸಿದ್ದಾರೆ. ಲಾವಣ್ಯಗೆ ಮದುವೆಯಾಗಿದ್ದು, ಪತಿಯ ಜೊತೆಗಿನ ವಿರಸದ ಕಾರಣ ತನ್ನಿಬ್ಬರು ಮಕ್ಕಳೊಂದಿಗೆ ತಂದೆಯ ಮನೆಯಲ್ಲಿ ವಾಸವಿದ್ದರು.

ಶುಕ್ರವಾರ ರಾತ್ರಿ 8:30 ರಲ್ಲಿ ಈ ದಾಳಿ ನಡೆದಿದ್ದು, ಚಿಕಿತ್ಸೆಗಾಗಿ ಲಾವಣ್ಯಳನ್ನು ಕೂಡಲೇ ವೆಲ್ಲೂರಿನ ಕ್ರಿಸ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸಿಡ್ ದಾಳಿಯಿಂದ ಲಾವಣ್ಯ ಮುಖ, ಕೈಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಕಾಲ ಣರಾದವರ ಪತ್ತೆಗೆ ಕೂಡಕೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.