ನೀನು ತಮಿಳಿಗನಲ್ಲ…. ರಜನಿಗೆ ತಮಿಳು ಸಂಘಟನೆಗಳ ಪ್ರತಿಭಟನೆಯ ಬಿಸಿ

ತಾನು ಪಕ್ಕಾ ತಮಿಳಿಗ ಎಂದು ತಮಿಳುನಾಡು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿ, ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ಬೆನ್ನಲ್ಲೇ, ನೀನು ತಮಿಳಿಗನಲ್ಲ, ರಾಜಕೀಯಕ್ಕೆ ಬರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ತಮಿಳು ಸಂಘಟನೆಗಳು ಬೀದಿಗಿಳಿದಿವೆ. ತಮಿಳು ಸಂಘಟನೆಗಳು ರಜನಿಕಾಂತ್ ಮೂಲದ ಬಗ್ಗೆ ಪ್ರಶ್ನಿಸುತ್ತಿದ್ದು, ರಜನೀಕಾಂತ್ ಮೂಲ ಮರಾಠಿಗರಾಗಿದ್ದು, ಕೆಲ ವರ್ಷಗಳು ಕರ್ನಾಟಕದಲ್ಲಿದ್ದರು ಹೀಗಾಗಿ ಅವರು ಹೇಗೆ ತಮಿಳಿಗರಾಗಿರಲು ಸಾಧ್ಯ ಎಂದು ಸಂಘಟನೆಗಳು ಪ್ರಶ್ನಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಅವರನ್ನು ತಮಿಳುನಾಡು ರಾಜಕಾರಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಸಿವೆ. ಸೋಮವಾರ ಚೆನ್ನೈನಲ್ಲಿನ ರಜನೀಕಾಂತ್ ನಿವಾಸದ ಬಳಿ ದೊಡ್ಡ ಸಂಖ್ಯೆಯಲ್ಲಿ ತಮಿಳು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ರಜನಿ ಮನೆ ಮುಂದೆ ಉದ್ರಿಕ್ತ ಪರಿಸ್ಥಿತಿ ನೆಲೆಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಬಿಗಿ ಭದ್ರತೆ ಒದಗಿಸಿದ್ದರು.