ತಮಿಳುನಾಡು ಸಿ.ಎಸ್ ಆಸ್ಪತ್ರೆಗೆ ದಾಖಲು

ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಪಿ.ರಾಮಮೋಹನ್ ರಾವ್ ಅಸ್ವಸ್ತರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನಯ ಚೆನ್ನೈನ ರಾಮಚಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗಷ್ಟೇ ಆದಾಯ ತೆರಿಗೆ ಅದಿಕಾರಿಗಳಯ ನಡೆಸಿದ ದಾಳಿಯಲ್ಲಿ ರಾಮ್ ಮೊಹನರಾವ್ ಭ್ರಷ್ಟಾಚಾರ ಬಯಲಾಗಿತ್ತು. ಹೀಗಾಗಿ ಅವರನ್ನು ಸಸ್ಪೆಂಡ್ ಮಾಡಿದ ತಮಿಳುನಾಡು ಸರ್ಕಾರ, ಅವರ ಸ್ಥಾನಕ್ಕೆ ಗಿರಿಜಾ ವೈದ್ಯನಾಥನ್ ರವರನ್ನು ನೇಮಕ ಮಾಡಿತ್ತು.

ಮಾಜಿ ಸಿಎಂ ಜಯಲಲಿತಾ ಅಧಿಕಾರಾವಧಿಯಲ್ಲಿ ನೇಮಕವಾಗಿದ್ದ ರಾಮಮೋಹನ್ ರಾವ್, ಅವರ ಪುತ್ರ ವಿವೇಕ್ ರಾವ್ ಹಾಗೂ ಇತರರ ನಿವಾಸಗಳಿಂದ ರೂ. 30 ಲಕ್ಷ ಮೌಲ್ಯದ ಹೊಸ 2 ಸಾವಿರ ಮುಖಬೆಲೆಯ ನೋಟುಗಳು, 5 ಕೆಜಿ ಚಿನ್ನ, 5 ಕೋಟಿ ಮೌಲದಯದ ಆಸ್ತಿ ದಾಖಲೆಗಳನ್ನು ಐಟಿ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರು. ಈ ಕುರಿತು ತನಿಖೆ ಇನ್ನೂ ನಡೆಯುತ್ತಿದೆ.

Related News

Comments (wait until it loads)
Loading...
class="clear">