ಆಫರ್ ವಾರ್, ಬಿಎಸ್ಎನ್ಎಲ್ ನಿಂದ ಬಂಪರ್ ಆಫರ್

ಜಿಯೋ ನೀಡಿದ ಶಾಕ್ ನಿಂದಾಗಿ ಏರ್ಟೆಲ್, ವೊಡಾಫೋನ್ ಕೆಳಗಿಳಿದು ಬಂದು ಅನಿಯಮಿತ ವಾಯ್ಸ್ ಕಾಲಿಂಗ್ ಆಫರ್ ಗಳನ್ನು ತಮ್ಮ ಗ್ರಾಹಕರಿಗೆ ನೀಡುತ್ತಿವೆ. ಇವುಗಳ ಹಾದಿಯಲ್ಲೇ ಈಗ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಬಂಪರ್ ಆಫರ್ ಪ್ರಕಟಿಸಿದೆ.

ಪ್ರೀಪೇಯ್ಡ್ ಗ್ರಾಹಕರಿಗೆ ಲಿಮಿಟೆಡ್ ಉಚಿತ ಡಾಟಾನೊಂದಿಗೆ, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಆಫರ್ ತರುತ್ತಿದೆ. ಇದಕ್ಕಾಗಿ ರೂ. 99 ರೀಚಾರ್ಜ್ ಮಾಡಿಕೊಂಡರೆ ಸಾಕು, ತಿಂಗಳು ಪೂರ್ತಿ ಅನ್ ಲಿಮಿಟೆಡ್ ಲೋಕಲ್ ವಾಯ್ಸ್ ಕಾಲ್ಸ್, ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಗೆ ಉಚಿತ ಎಸ್ಟಿಡಿ ಕರೆಗಳನ್ನು ಮಾಡಬಹುದು. ಇದರ ಜೊತೆಗೆ 300 ಎಂ.ಬಿ ಡಾಟಾ ಉಚಿತವಾಗಿ ಪಡೆಯಬಹುದು.

ಈ ಕೊಡುಗೆ ಕೋಲ್ಕತಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ, ಮಹಾರಾಷ್ಟ್ರ, ರಾಜಸ್ಥಾನ ನೆಟ್ವರ್ಕ್ ವ್ಯಾಪ್ತಿಯಲ್ಲಿ ಲಭ್ಯವಿರುತ್ತದೆ. ಇದೇ ಕೊಡುಗೆ ಉಳಿದ ಸರ್ಕಲ್ ಗಳಲ್ಲಿ ರೂ. 119 ರಿಂದ ರೂ. 149 ರ ರೀಚಾರ್ಜ್ ಗಳಿಗೆ ಲಭ್ಯವಾಗಲಿದೆ.

ರೂ. 339 ರೀಚಾರ್ಜ್ ಮಾಡಿಕೊಂಡರೆ ತಿಂಗಳು ಪೂರ್ತಿ ಬಿಎಸ್ಎನ್ಎಲ್ ನಿಂದ ಯಾವುದೇ ನೆಟ್ವರ್ಕ್ ಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮಾಡಬಹುದು. ಇದರ ಜೊತೆಗೆ 1 ಜಿಬಿ ಡಾಟಾ ಉಚಿತ.