ತೆರಿಗೆ ಪಾವತಿ ಇನ್ನು ಸ್ಮಾರ್ಟ್ ಸ್ಮಾರ್ಟ್…

ನವದೆಹಲಿ: ಸ್ಮಾರ್ಟ್ ಫೋನ್ ಮೂಲಕ ನಿಮಿಷಗಳಲ್ಲಿಯೇ ಪಾನ್ ನಂಬರ್ ನೀಡಲು ಅನುಕೂಲವಾಗುವಂತೆ ತೆರಿಗೆ ಇಲಾಖೆ ವಿಶೇಷ ಮೊಬೈಲ್ ಆಪ್ ಸಿದ್ಧಪಡಿಸಲು ಪ್ರಯತ್ನಿಸುತ್ತಿದೆ. ಆನ್ಲೈನ್ ನಲ್ಲಿ ತೆರಿಗೆ ಪಾವತಿ, ರಿಟರ್ನ್ಸ್ ಟ್ರ್ಯಾಕಿಂಗ್ ಮುಂತಾದ ಸೌಲಭ್ಯಗಳನ್ನೂ ಈ ಆಪ್ ನಲ್ಲಿ ನೀಡಲಿದೆ. ಸದ್ಯ ಈ ಚಿಂತನೆ ಪ್ರಾಥಮಿಕ ಹಂತದಲ್ಲಿಯೇ ಇದ್ದು, ಆರ್ಥಿಕ ಇಲಾಖೆಯ ಅನುಮತಿ ಪಡೆದ ನಂತರ ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮತ್ತಷ್ಟು ಜನರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಆಧಾರ ಆಧಾರಿತವಾಗಿ ಪಾನ್ ಸಂಖ್ಯೆ ಜಾರಿ ಮಾಡಲು ಚಿಂತನೆ ನಡೆಸಿರುವುದಾಗಿ ಬಲ್ಲ ಮೂಲಗಳು ಹೇಳಿವೆ.

ಇಲ್ಲಿಯವರೆಗೂ 111 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆ ಜಾರಿಯಾಗಿರುವುದಾಗಿ ಅಂದಾಜಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಈಗ ಹೊಸ ಸಿಮ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಸಬ್ಸಿಡಿ ಪಡೆಯಲು ಮುಂತಾದವುಗಳಿಗೆ ಉಪಗೋಗವಾಗುತ್ತಿದೆ. ಅಂಕಿಅಂಶಗಳ ಪ್ರಕಾರ ಪ್ರತಿವರ್ಷ 2.5 ಕೋಟಿ ಜನರು ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಸದ್ಯ ದೇಶಾದ್ಯಂತ 25 ಕೋಟಿಗೂ ಅಧಿಕ ಜನರು ಪಾನ್ ಕಾರ್ಡ್ ಹೊಂದಿದ್ದಾರೆ. ರೂ. 50,000 ಮೀರಿದ ನಗದು ವಿತ್ ಡ್ರಾಗಳಿಗೆ, ರೂ. 2 ಲಕ್ಷ ಮೀರಿದ ಖರೀದಿಗಳಿಗೆ ಸರ್ಕಾರ ಪಾನ್ ಕಾರ್ಡ್ ಕಡ್ಡಾಯ ಮಾಡಿದೆ. ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ ಪಾನ್ ಕಾರ್ಡ್ ಗಳನ್ನು ಈ ವರ್ಷ ಜನವರಿ 1 ರಿಂದ ತೆರಿಗೆ ಇಲಾಖೆ ನೀಡುತ್ತಿದೆ.

Related News

Loading...

Leave a Reply

Your email address will not be published.

error: Content is protected !!