Big Breaking News

ನೋಟು ನಿಷೇಧ ವ್ಯವಸ್ಥಿತ ಸಂಚು ಎಂದು ಅನುಮಾನ: ಟಿಬಿ ಜಯಚಂದ್ರ

ಹಳೆಯ 500, 1000 ಮುಖಬೆಲೆಯ ನೋಟು ನಿಷೇಧದ ನಂತರ ಕಪ್ಪು ಬಿಳಿಯಾಗಿಸುವ ದಂಧೆ ಜೋರಾಗಿದ್ದು, ಶೇ. 50 ರಷ್ಟು ಕಮೀಷನ್ ನೀಡಿ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನೋಟು ನಿಷೇಧದ ಹಿಂದೆ ವ್ಯವಸ್ಥಿತ ಸಂಚು ಇದೆ ಎಂಬ ಅನುಮಾನ ಮೂಡುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

Download Free

ಬುಧವಾರ ಆರ್.ಟಿ.ನಗರದಲ್ಲಿ ನ್ಯಾಯಪರ ವೇದಿಕೆ ಉದ್ಘಾಟಿಸಿದ ನಂತರ ಮಾತನಾಡಿದ ಅವರು ಕಪ್ಪು ಹಣ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ್ದರೆ ನಾನು ಸ್ವಾಗತಿಸುತ್ತೇನೆ. ಆದರೆ ಶೇ.30 ರಿಂದ 50 ರಷ್ಟು ಕಮೀಷನ್ ನೀಡಿ ಕಪ್ಪುಹಣ ಬಿಳಿ ಮಾಡಿಕೊಳ್ಳುವ ದಂಧೆ ನಡೆಯುತ್ತಿದೆ. ಸಚಿವನಾದ ನನಗೇ ನನ್ನ ಹತ್ತು ಸಾವಿರ ರೂಪಾಯಿ ತೆಗೆಯಲು ಕಷ್ಟವಾಯಿತು, ಆದರೆ ನನಗೆ ಪರಿಚಿತ ಹುಡುಗನೊಬ್ಬ 5 ಲಕ್ಷ ರೂಪಾಯಿ ಕಪ್ಪು ಹಣವನ್ನು ಬಿಳಿ ಮಾಡಿಕೊಂಡು ಬಂದಿದ್ದಾಗಿ ನನಗೆ ಹೇಳಿ, ಬದಲಾಯಿಸಿಕೊಂಡು ಬಂದ ಹಣವನ್ನೂ ತೋರಿಸಿದ ಎಂದು ಹೇಳಿದ್ದಾರೆ.

ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತಮ್ಮ ಕಣ್ಣ ಮುಂದೆಯೇ ಕಪ್ಪು ಹಣ ಬದಲಾಯಿಸಿದ ಸಾಕ್ಷಿ ಇದ್ದರೂ ಸುಮ್ಮನಿರುವುದೇಕೆ, ಪರಿಚಿತ ಹುಡುಗ ಯಾರು ಎಂದು ಬಹಿರಂಗ ಪಡಿಸುವ ಹೊಣೆ ಅವರ ಮೇಲಿಲ್ಲವೇ? ಅದು ಬಹಿರಂಗಪಡಿಸಿದರೆ ಸಚಿವರೇ ಹೇಳುತ್ತಿರುವಂತಹ ಕಮೀಷನ್ ದಂಧೆಗೆ ಕಡಿವಾಣ ಹಾಕಲು ಅನುಕೂಲ ಆಗುತ್ತದೆ ಅಲ್ಲವೇ ಎಂಬುದು ನಮ್ಮ ಪ್ರಶ್ನೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache