ಚಿಂತಾಮಣಿ: ಬೆಂಕಿ ಅವಘಡದಲ್ಲಿ ಟೀ ಅಂಗಡಿ ಭಸ್ಮ

ಚಿಂತಾಮಣಿ, ಫೆ. 14 : ಆಕಸ್ಮಿಕವಾಗಿ ಬೆಂಕಿ ತಗುಲಿ ಟೀ ಅಂಗಡಿಯೊಂದು ಸುಟ್ಟು ಭಸ್ಮವಾದ ಘಟನೆ ಚಿಂತಾಮಣಿ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿಂದ ವರದಿಯಾಗಿದೆ.

ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದ ಸಪ್ತಗಿರಿ ಲಾಡ್ಜ್ ಮುಂಬಾಗದಲ್ಲಿ ಫಿರ್ದೋಸ್ ಎಂಬುವವರು ಜೀವನೋಪಾಯಕ್ಕಾಗಿ ಪೆಟ್ಟಿಗೆ ಅಂಗಡಿಯಲ್ಲಿ ಟೀ- ಕಾಫಿ ವ್ಯಾಪಾರ ಮಾಡಿಕೊಂಡಿದ್ದರು. ಎಂದಿನಂತೆ ಬುಧವಾರ ಸಹ ವ್ಯಾಪಾರದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ನೋಡನೋಡುತ್ತಿದ್ದಂತೆ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ಸುಮಾರು 60 ಸಾವಿರ ರೂಪಾಯಿ ನಷ್ಟವುಂಟಾಗಿದೆ ತಿಳಿದುಬಂದಿದೆ.

ವಿಷಯ ತಿಳಿದ ಕೂಡಲೆ ಆಗ್ನಿಶಾಮಕ ವಾಹನ ಸಿಬ್ಬಂದಿ ಕ್ಷಣಾರ್ದದಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Get Latest updates on WhatsApp. Send ‘Subscribe’ to 8550851559