ಅವನಿಗೆ ಕೇವಲ 16 ವರ್ಷ, ಆಕೆ 71 ವರ್ಷದ ಮಹಿಳೆ – News Mirchi

ಅವನಿಗೆ ಕೇವಲ 16 ವರ್ಷ, ಆಕೆ 71 ವರ್ಷದ ಮಹಿಳೆ

ಪ್ರೀತಿ ಕುರುಡು, ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ಗಡಿಯ ಹಂಗಿಲ್ಲ ಅಂತಾರೆ. ಇಂಡೋನೇಷಿಯಾದಲ್ಲಿನ ಈ ಜೋಡಿ ತಮ್ಮ ಮದುವೆಗೆ ಹಲವು ಅಡ್ಡಿಗಳು ಎದುರಾದರೂ ಹೆದರದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಹೆದರಿಸಿ ಬೆದರಿಸಿ ಕೊನೆಗೆ ಮದುವೆಯಾಗಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ವರನ ವಯಸ್ಸು ಕೇವಲ 16 ವರ್ಷ. ವಧವಿನ ವಯಸ್ಸು ಹೇಳಲೇ ಬೇಕಲ್ವಾ… ಆಕೆಯ ವಯಸ್ಸೂ ಜಸ್ಟ್ 71 ಅಷ್ಟೇ…! ಹೀಗಾಗಿ ಇದು ಈಗ ಹಾಟ್ ಟಾಪಿಕ್.

ಇಂಡೇನೇಷಿಯಾದಲ್ಲಿನ 16 ವರ್ಷದ ಬಾಲಕ ಸೇಲಮತ್ ರಿಯಾದಿ ಮತ್ತು 71 ವರ್ಷದ ಅಜ್ಜಿಗೆ ಲವ್ ಆಗಿದೆ. ಸೇಲಮತ್ ಮಲೇರಿಯಾದಿಂದ ಬಳಲುತ್ತಿದ್ದಾಗ 71 ವರ್ಷ ರೊಹಾಯಾ ಬಿಂಟಿ ಎಂಬಾಕೆ ಆರೈಕೆ ಮಾಡಿದಳಂತೆ. ಹಾಗೆ ಇವರ ಪ್ರೀತಿ ಶುರುವಾಗಿದೆ. ನಂತರ ಮದುವೆಯೂ ಮಾಡಿಕೊಳ್ಳಲು ಮುಂದಾದರು. ಆದರೆ ಅದಕ್ಕೆ ಬಾಲಕನ ಮನೆಯವರು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಮದುವೆ ಮಾಡದಿದ್ರೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಬಾಲಕ ತನ್ನ ತಂದೆ ತಾಯಿಗೆ ಹೆದರಿಸಿದ. ಮಗ ಹೇಳಿದ್ದನ್ನು ಮಾಡೇ ಮಾಡ್ತಾನೆ ಅಂತ ಹೆದರಿದ ಅಪ್ಪ ಅಮ್ಮ, ಅಂತಿಮವಾಗಿ ಮದುವೆಗೆ ಒಪ್ಪಿಕೊಂಡಿದ್ದಾರೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಇಬ್ಬರ ಮದುವೆಯೂ ಆಯಿತು.

ಚಿಂತಾಮಣಿ: ಮಾಜಿ ಪತಿ ಸಮ್ಮುಖದಲ್ಲಿ ಪ್ರೀತಿಸಿದವನ ಕೈಹಿಡಿದಾಕೆ

71 ವರ್ಷದ ಮಹಿಳೆಯೊಂದಿಗೆ 16 ವರ್ಷದ ಬಾಲಕನ ಮದುವೆ ಅಂದ್ರೆ ಸುತ್ತಮುತ್ತಲಿನ ಗ್ರಾಮಸ್ಥರು ಸುಮ್ನಿರ್ತಾರಾ? ಅರೆ ಇದೆಂಥ ಮದುವೆ ಅಂತ ಕುತೂಹಲದಿಂದ ತಾವೂ ಆಗಮಿಸಿ ಮದುವೆ ವೀಕ್ಷಿಸಿದರು. ಮಹಿಳೆಗೆ ಇದಕ್ಕೂ ಮುನ್ನ 2 ಮದುವೆಗಳಾಗಿದ್ದವಂತೆ. ಅಲ್ಲಿನ ಕಾನೂನುಗಳ ಪ್ರಕಾರ ವರನಿಗೆ 19 ವರ್ಷ ವಯಸ್ಸಾಗಿರಬೇಕು. ಆದರೆ ಈ ಬಾಲಕನ ವಯಸ್ಸು 16 ವರ್ಷಗಳಾಗಿರುವುದರಿಂದ ಈ ಮದುವೆ ಊರ್ಜಿತವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

4ಜಿ ಸಪೋರ್ಟ್ ಮಾಡಬಲ್ಲ ಮೂರು ಸ್ಮಾರ್ಟ್ ಫೋನ್, ಬೆಲೆ ಎಷ್ಟು?

Click for More Interesting News

Loading...
error: Content is protected !!