ಸಂತ್ರಸ್ತರ ಹೆಸರಿನಲ್ಲಿ ತೀಸ್ತಾ ಸೆಟಲ್ವಾಡ್ ಸ್ವಾಹಾ: ಸುಪ್ರೀಂಗೆ ವಿವರಿಸಿದ ಪೊಲೀಸರು |News Mirchi

ಸಂತ್ರಸ್ತರ ಹೆಸರಿನಲ್ಲಿ ತೀಸ್ತಾ ಸೆಟಲ್ವಾಡ್ ಸ್ವಾಹಾ: ಸುಪ್ರೀಂಗೆ ವಿವರಿಸಿದ ಪೊಲೀಸರು

ಎನ್‌ಜಿಒ ಗಳಿಗೆ ಹರಿದು ಬರುವ ದೇಣಿಗೆಗಳಲ್ಲಿ ಎಷ್ಟು ಮೊತ್ತ ಸಂತ್ರಸ್ತರಿಗೆ ತಲುಪುತ್ತೋ, ಎಷ್ಟು ಮೊತ್ತ ಎನ್‌ಜಿಒ ನಡೆಸುವವರ ಜೇಬಿಗೆ ಸೇರುತ್ತೋ ಹೇಳುವುದು ಕಷ್ಟ. ಈಗ ಗುಜರಾತ್ ಪೊಲೀಸರು ಕೂಡಾ ಅಂತಹದ್ದೇ ಒಂದು ಸಂಚಲನ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2002 ರಲ್ಲಿ ಗುಜರಾತ್ ಗಲಭೆಗಳಿಂದ ಸಂತ್ರಸ್ತರಾದವರ ನೆರವಿಗೆ ಎಂದು ಹಲವು ಮಾರ್ಗಗಳ ಮೂಲಕ ತಮ್ಮ ಎನ್‌ಜಿಒ ಗೆ ಹರಿದು ಬಂದಿದ್ದ ರೂ. 9.75 ಕೋಟಿ ಹಣದಲ್ಲಿ ರೂ. 3.85 ಕೋಟಿಗಳನ್ನು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಆಕೆಯ ಪತಿ ಸೇರಿ ಕಳ್ಳದಾರಿ ಹಿಡಿಸಿ ಗುಳುಂ ಮಾಡಿದ್ದಾರೆ ಎಂದು ಪೊಲೀಸರು ಸುಪ್ರೀಂ ಕೋರ್ಟ್ ಗೆ 83 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ.

ಗುಲ್ಬರ್ಗ್ ಸೊಸೈಟಿಗೆ ಸೇರಿದ ಗುಜರಾತ್ ಗಲಭೆ ಸಂತ್ರಸ್ತರ ಕುಟುಂಬ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ತಾವು ಪ್ರಯತ್ನಿಸಿದರೂ, ತೀಸ್ತಾ ಸೆಟಲ್ವಾಡ್, ಆಕೆಯ ಪತಿ ಜಾವೇದ್ ಆನಂದ್, ಅವರ ಟ್ರಸ್ಟ್ ಗಳಾದ ಸೆಂಟರ್ ಫಾರ್ ಜಸ್ಟೀಸ್ ಅಂಡ್ ಪೀಸ್(ಸಿಜೆಪಿ), ಸಬ್‌ರಂಗ್ ಯಾವುದೇ ರೀತಿ ಸಹಕರಿಸಿಲ್ಲ ಎಂದು ಎಸಿಪಿ ರಾಹುಲ್ ಬಿ ಪಟೇಲ್ ಹೇಳಿದ್ದಾರೆ.

ಈ ಹಿಂದೆ ಸೆಟಲ್ವಾಡ್ ದಂಪತಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ್ದರೂ, ಸುಪ್ರೀಂ ಕೋರ್ಟ್ ಅವರಿಬ್ಬರನ್ನೂ ಬಂಧಿಸಬಾರದು ಎಂದು ಪೊಲೀಸರಿಗೆ ಸೂಚಿಸಿತ್ತು. ಆದರೆ ಪೊಲೋಸರಿಗೆ ಅಗತ್ಯ ದಾಖಲೆಗಳನ್ನು ನಿಡುವಂತೆ ತೀಸ್ತಾ ಸೆಟಲ್ವಾಡ್ ದಂಪತಿಗಳಿಗೆ ಸೂಚಿಸಿತ್ತು. ತಮ್ಮ ಘನತೆಗೆ ಕುಂದುಂಟು ಮಾಡಲು ಗುಜರಾತ್ ಪೊಲೀಸರು ಈ ರೀತಿ ತನಿಖೆ ನಡೆಸುತ್ತಿದ್ದಾರೆ ಎಂದು ಸೆಟಲ್ವಾಡ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದೊರೆ ಹೋಗಿದ್ದರು.

ತಾವು ಸಿಜೆಪಿ, ಸಬ್ರಂಗ್, ಸೆಟಲ್ವಾಡ್, ಜಾವೇದ್ ಆನಂದ್ ರವರ ಬ್ಯಾಂಕ್ ಖಾತೆಗಳನ್ನು 2007 ರಿಂದ 2014 ರವರೆಗೆ ಪರಿಶೀಲಿಸಿದ್ದೇವೆ ಎಂದು ಪೊಲೀಸರು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. ಈ ವೇಳೆ ಎರಡು ಎನ್‌ಜಿಒ ಗಳಿಗೆ ಒಟ್ಟು ರೂ. 9.75 ಕೋಟಿ ಸ್ವದೇಶಿ, ವಿದೇಶಿ ದೇಣಿಗೆ ಹರಿದು ಬಂದಿತ್ತು. ಅದರಿಂದ ಈ ದಂಪತಿಗಳು ತಮ್ಮ ವೈಯುಕ್ತಿಕ ಖರ್ಚುಗಳಿಗಾಗಿ ರೂ. 3.85 ಕೋಟಿ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ತಮ್ಮ ವೈಯುಕ್ತಿಕ ಖಾತೆಗಳಿಗೆ ಜಾವೇದ್ ಆನಂದ್ ರೂ. 96.43 ಲಕ್ಷಗಳು, ತೀಸ್ತಾ ಸೆಟಲ್ವಾಡ್ ರೂ‌. 1.53 ಕೋಟಿ ಜಮೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

2011 ಫೆಬ್ರವರಿಯಿಂದ 2012 ರ ಜುಲೈ ವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ ರೂ. 1.40 ಕೋಟಿ ಅನುದಾನವನ್ನು ಕೂಡಾ ಸ್ವಲ್ಪ ಹಣವನ್ನು ತಮ್ಮ ವೈಯುಕ್ತಿಕ ಖರ್ಚುಗಳಿಗೆ ಉಪಯೋಗಿಸಿಕೊಂಡಿದ್ದಾರೆ ಎಂದು ಪೊಲೀಸರು ಅರೋಪಿಸಿದ್ದಾರೆ. ತಾವು ಕೆಲ ಖಾತೆಗಳನ್ನು 2014 ಜನವರಿ 23 ರಂದು ಸೀಜ್ ಮಾಡುತ್ತಿದ್ದಂತೆ, ನಮಗೆ ತಿಳಿಯದಂತೆ ಒಂದೇ ದಿನದಲ್ಲಿ ಡಿಡಿ ರೂಪದಲ್ಲಿ ರೂ. 24.5 ಲಕ್ಷ ಮತ್ತು ರೂ. 11.5 ಲಕ್ಷಗಳನ್ನು ಸಬ್ರಂಗ್ ಟ್ರಸ್ಟ್ ಗೆ ಸೇರಿದ ಮತ್ತೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದೂ ಅಫಿಡವಿಟ್ ನಲ್ಲಿ ದೂರಿದ್ದಾರೆ.

ಅಕೌಂಟ್ ಗಳನ್ನು ಪೊಲೀಸರು ಸೀಜ್ ಮಾಡಿದ ನಂತರ, ಸಬ್ರಂಗ್ ಟ್ರಸ್ಟ್ ಜನರಲ್ ಅಕೌಂಟ್, ಸಬ್ರಂಗ್ ಟ್ರಸ್ಟ್ ಹೆಚ್‌ಆರ್‌ಡಿ ಅಕೌಂಟ್ ಹೆಸರಿನಲ್ಲಿ ಮತ್ತೊಂದು ಬ್ಯಾಂಕಿನಲ್ಲಿ ಖಾತೆ ತೆರೆದ ವಿಷಯವನ್ನೂ ಈ ದಂಪತಿಗಳು ಕೋರ್ಟ್ ಗೆ ತಿಳಿಯದಂತೆ ಮುಚ್ಚಿಟ್ಟಿದ್ದಾರೆ ಎಂದರು. 2007 ಕ್ಕಿಂದ ಮೊದಲು ಸಿಜೆಪಿ, ಸಬ್ರಂಗ್ ಟ್ರಸ್ಟ್ ಖಾತೆಗಳಲ್ಲಿ ತುಂಬಾ ಸಣ್ಣ ಮೊತ್ತದ ಹಣ ಮಾತ್ರ ಇರುತ್ತಿತ್ತು. ಸಂತ್ರಸ್ತರಿಗೆ ನೆರವು ನೀಡಲು, ಅವರಿಗೆ ಪುನರ್ವಸತಿ ಕಲ್ಪಿಸಲು ತುರ್ತಾಗಿ ನಮಗೆ ದೇಣಿಗೆ ನೀಡಿ ಎಂದು ಈ ದಂಪತಿಗಳು ವೆಬ್ಸೈಟುಗಳು, ಸಂದರ್ಶನಗಳು, ಸುದ್ದಿ ಪತ್ರಿಕೆಗಳ ಮೂಲಕ ವಿಪರೀತ ಪ್ರಚಾರ ನಡೆಸಿದ ನಂತರ ವಿದೇಶಗಳಿಂದಲೂ ಅಪಾರ ಪ್ರಮಾಣದ ದೇಣಿಗೆಗಳು ಹರಿದು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಲಭೆ ಸಂತ್ರಸ್ತರಿಗೆ ಉಚಿತ ಕಾನೂನು ಸಹಕಾರ ನೀಡಿದ್ದೇವೆ ಎಂದು ಈ ಸೆಟಲ್ವಾಡ್ ದಂಪತಿಗಳು ಹೇಳುತ್ತಿರುವುದು ಸುಳ್ಳು. ಲೀಗಲ್ ಫೀಸ್ ಹೆಸರಿನಲ್ಲಿ ವಿವಿಧ ವಕೀಲರಿಗೆ ರೂ. 71.40 ಲಕ್ಷಗಳನ್ನು ಪಾವತಿ ಮಾಡಿರುವುದಾಗೊ ದಾಖಲೆಗಳಲ್ಲಿ ತಿಳಿಸಿದ್ದಾರೆ, ಹೀಗಾಗಿ ಸೆಟಲ್ವಾಡ್ ದಂಪತಿಗಳನ್ನು ವಿಚಾರಣೆ ನಡೆಸಲು ಅವರನ್ನು ನಮ್ಮ ವಶಕ್ಕೆ ನೀಡಿ ಎಂದು ಪೊಲೀಸರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.

Loading...
loading...
error: Content is protected !!