ಥಿಯೇಟರ್ ನಲ್ಲಿ ಆತ್ಮಗಳು, ಹಾರಿ ಹೋದ ಸ್ಕ್ರಿಪ್ಟ್ : ಘೋಸ್ಟ್ ಹಂಟರ್ಸ್ ಶಾಕ್ – News Mirchi

ಥಿಯೇಟರ್ ನಲ್ಲಿ ಆತ್ಮಗಳು, ಹಾರಿ ಹೋದ ಸ್ಕ್ರಿಪ್ಟ್ : ಘೋಸ್ಟ್ ಹಂಟರ್ಸ್ ಶಾಕ್

ಥಿಯೇಟರೊಂದರಲ್ಲಿ ಕೆಲವು ಘೋಸ್ಟ್ ಹಂಟರ್ ಗಳು ತೆಗೆದ ಫುಟೇಜ್ ಸಾಮಾಜಿಕ ತಾಣಗಳಲ್ಲಿ ಸಂಚಲನ ಮೂಡಿಸಿದೆ. ಲಿಂಕನ್ ಶೈರ್ ನಲ್ಲಿನ ಓಲ್ಡ್ ನಿಕ್ ಥಿಯೇಟರ್ ನಲ್ಲಿ ಹತ್ಯೆಗೆ ಗುರಿಯಾದ 25 ಜನ ಕಲಾವಿದರ ಆತ್ಮಗಳು ಅಲ್ಲಿಯೇ ಇವೆ ಎಂಬ ಅನುಮಾನದಿಂದ ಘೋಸ್ಟ್ ಹಂಟರ್ ಗಳ ತಂಡ ಅಲ್ಲಿಗೆ ತೆರಳಿತ್ತು. ದೆವ್ವಗಳಿವೆಯೆಂಬ ಅನುಮಾನದಿಂದಲೇ ಥಿಯೇಟರ್ ಈಗಲೂ ಪಾಳುಬಿದ್ದಿದೆ.

ಲಿಂಕನ್ ಶೈರ್: ಹೀಗಾಗಿ ಹಂಟರ್ ಗಳು ಮಧ್ಯರಾತ್ರಿ ತಮ್ಮೊಂದಿಗೆ ಇನ್ಫ್ರಾರೆಡ್ ಕ್ಯಾಮೆರಾಗಳನ್ನು ತೆಗೆದುಕೊಂಡು ಥಿಯೇಟರ್ ಗೆ ತೆರಳಿತ್ತು. ಹತ್ಯೆಗೆ ಗುರಿಯಾದ ಪ್ರದೇಶ ಸೇರಿದಂತೆ ಥಿಯೇಟರ್ ನಲ್ಲಿ ಅನುಮಾನಾಸ್ಪದವಾಗಿ ಕಾಣಿಸಿದ ಪ್ರತಿ ಸಣ್ಣ ವಸ್ತುಗಳನ್ನ ಚಿತ್ರೀಕರಿಸಿಕೊಂಡು ಬಂದರು. ಮರುದಿನ ಆ ವೀಡಿಯೋವನ್ನು ನೋಡಿದ ಆತ್ಮಗಳ ಬೇಟೆಗಾರರು ಶಾಕ್ ಆಗಿದ್ದರು.

ಕೊಲೆಯಾದ ಪ್ರದೇಶದಲ್ಲಿಯೇ ಆತ್ಮಗಳೆಲ್ಲಾ ಗುಂಪುಗೂಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ಏನೋ ವಸ್ತು ಅತ್ತಿತ್ತ ಹಾರುತ್ತಾ ಹೋಗಿದ್ದು ಸೆರೆಯಾಗಿದೆ. ಇದು ತುಂಬಾ ತಡವಾಗಿ ತಂಡದ ಗಮನಕ್ಕೆ ಬಂದಿದೆ. ಅದು ನಾಟಕಕ್ಕೆ ಸಂಬಂಧಿಸಿದ ಹಳೆಯ ಸ್ಕ್ರಿಪ್ ಪೇಪರ್ ಇರಬಹುದು ಎನ್ನಲಾಗುತ್ತಿದೆ. ಈ ಚಿತ್ರಗಳನ್ನು ಟಿಮ್ ಮಾಥ್ಯೂಸ್ ಎಂಬ ವ್ಯಕ್ತಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ವೀಕ್ಷಿಸಿದ ಕೆಲವರು ಸಣ್ಣ ಪೇಪರ್ ತುಣುಕು ಹಾರಿ ಹೋಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಗಮನಕ್ಕೆ ತಂದಿದ್ದಾರೆ. ಥಿಯೇಟರ್ ನಲ್ಲಿ ಆತ್ಮಗಳಿವೆಯಾ? ಇಲ್ಲವೇ ಎಂಬ ವಿಷಯಗಳನ್ನು ತಿಳಿಯಲು ‘ಹ್ಯೂಮನ್ ಪೆಂಡಲಂ’ ಪರೀಕ್ಷೆಯನ್ನೂ ಮಾಡಿದ್ದಾಗಿ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...